* ಭಾರತದ ಶೀತಲ್ ದೇವಿ ಅವರು ವಿಶ್ವ ಆರ್ಚರಿ ಚಾಂಪಿಯನ್ಷಿಪ್ನಲ್ಲಿ ಕೈಗಳಿಲ್ಲದೇ ಚಿನ್ನ ಗೆದ್ದ ವಿಶ್ವದ ಮೊದಲ ಮಹಿಳಾ ಆಟಗಾರ್ತಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.* 18 ವರ್ಷದ ಶೀತಲ್ ಅವರು ಟರ್ಕಿಯ ಒಝ್ನೂರ್ ಕ್ಯುರ್ ಗಿರ್ದಿ ಅವರನ್ನು 146–143 ಅಂತರದಲ್ಲಿ ಸೋಲಿಸಿ ಈ ಸಾಧನೆ ಮಾಡಿದ್ದಾರೆ. ಜಮ್ಮು–ಕಾಶ್ಮೀರದ ಶೀತಲ್ ಕಾಲಿನಿಂದ ಬಾಣ ಹಾರಿಸಿ ವಿಶ್ವದ ಗಮನ ಸೆಳೆದಿದ್ದಾರೆ.* ಈ ಹಿಂದೆ ಕೈಗಳಿಲ್ಲದೇ ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದ ದಾಖಲೆಯು ಅಮೆರಿಕದ ಮ್ಯಾಟ್ ಸ್ಟುಟ್ಜ್ಮನ್ ಅವರ ಹೆಸರಿನಲ್ಲಿ ಇತ್ತು. ಶೀತಲ್ ಮಾತ್ರ ಮಹಿಳೆಯರಲ್ಲಿ ಇದೇ ಸಾಧನೆ ಮಾಡಿದ ಮೊದಲ ಆಟಗಾರ್ತಿ.* ಶೀತಲ್ ಹಾಗೂ ತೊಮನ್ ಕುಮಾರ್ ಜೋಡಿ ಕಾಂಪೌಂಡ್ ಮಿಶ್ರ ವಿಭಾಗದಲ್ಲಿ ಕಂಚು ಗೆದ್ದಿದ್ದರು. ನಂತರ ನಡೆದ ಪುರುಷರ ಕಾಂಪೌಂಡ್ ವೈಯಕ್ತಿಕ ಫೈನಲ್ನಲ್ಲಿ ತೊಮನ್ ಕುಮಾರ್, ರಾಕೇಶ್ ಕುಮಾರ್ ಅವರನ್ನು ಸೋಲಿಸಿ ಚಿನ್ನ ಗೆದ್ದರು.* ಪುರುಷರ ಓಪನ್ ವಿಭಾಗದಲ್ಲಿ ಶ್ಯಾಮ್ ಸುಂದರ್ ಸ್ವಾಮಿ ಕಂಚಿಗಾಗಿ ಹೋರಾಡಿ, ಬ್ರಿಟನ್ನ ನಥಾನ್ ಮೆಕ್ಕ್ವೀನ್ ವಿರುದ್ಧ 141–148 ಅಂತರದಲ್ಲಿ ಸೋತರು.