* ಕೈಗಾರಿಕಾ ಕ್ಷೇತ್ರದ ಬಂಡವಾಳ ಹೂಡಿಕೆಯಲ್ಲಿ ರಾಜ್ಯವು 2025ರ ಜೂನ್ ವೇಳೆಗೆ ದ್ವಿತೀಯ ಸ್ಥಾನಕ್ಕೆ ಏರಲಿದೆ. ಈಗಿರುವ ಈಗಿರುವ 54,427 ಕೋಟಿ ರೂ. ಹೂಡಿಕೆಯ ಜತೆಗೆ 19,059 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಖಾತ್ರಿಯಾಗಿದೆ ಎಂಉ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.* ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 70,795 ಕೋಟಿ ರು. ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಆಕರ್ಷಿಸುವ ಮೂಲಕ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ.*  19,059 ಕೋಟಿ ರು. ಬಂಡವಾಳ ಹೂಡಿಕೆಯೊಂದಿಗೆ ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂದು ಕೈಗಾರಿಕೆ ಹಾಗೂ ದೇಶೀಯ ವ್ಯಾಪಾರ ಉತ್ತೇಜನಾ ಇಲಾಖೆಯು ಅಂಕಿ -ಅಂಶ ಬಿಡುಗಡೆ ಮಾಡಿದೆ. ಈ ಮೂಲಕ ಕರ್ನಾಟಕದಲ್ಲಿ 73 ಸಾವಿರ ಕೋಟಿಗೂ ಹೆಚ್ಚಿನ ಹಣ ಹೂಡಿಕೆ ಆಗಲಿದೆ.* ಮೊದಲ ತ್ರೈಮಾಸಿಕ ಅವಧಿಯಲ್ಲಿ 134 ದೇಶದಲ್ಲಿ 1,34,959 ಕೋಟಿ ರು. ಹೂಡಿಕೆ ಆಗಿದ್ದರೆ, ಆ ಪೈಕಿ ಮಹಾರಾಷ್ಟ್ರಕ್ಕೇ 70,795 ಕೋಟಿ ರು. ಹರಿದುಬಂದಿದೆ. ತನ್ಮೂಲಕ ಒಟ್ಟಾರೆ ಹೂಡಿಕೆಯಲ್ಲಿ ಮಹಾರಾಷ್ಟ್ರದಲ್ಲೇ ಶೇ.52.46ರಷ್ಟು ಆಗಿದೆ ಎಂದಿದ್ದಾರೆ.- ರಾಜ್ಯ ಹೂಡಿಕೆ ಮೊತ್ತ (ಕೋಟಿ ₹ಗಳಲ್ಲಿ) 1. ಮಹಾರಾಷ್ಟ್ರ 70795 2. ಕರ್ನಾಟಕ 19059 3. ದೆಹಲಿ. 10788 4. ತೆಲಂಗಾಣ 9023 5. ಗುಜರಾತ್ 8508 6. ತಮಿಳುನಾಡು 5818