Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕೈಗಾ 1ನೇ ಅಣು ವಿದ್ಯುತ್ ಘಟಕ – ವಿಶ್ವ ದಾಖಲೆ ಬರೆಯುವ ಮೂಲಕ ಭಾರತದ ಹೊಸ ಮೈಲುಗಲ್ಲು
5 ನವೆಂಬರ್ 2025
* ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ
ಕೈಗಾ ಅಣು ವಿದ್ಯುತ್ ಘಟಕದ 1ನೇ ಘಟಕ
ವು ನಿರಂತರವಾಗಿ ವಿದ್ಯುತ್ ಉತ್ಪಾದಿಸುವಲ್ಲಿ
ವಿಶ್ವ ದಾಖಲೆ
ಯನ್ನು ನಿರ್ಮಿಸಿ ದೇಶದ ಪರಮಾಣು ಶಕ್ತಿ ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣವನ್ನು ತಂದಿದೆ. ಬ್ರಿಟನ್ನ ಹೇಶಮ್ ಅಣು ಸ್ಥಾವರ ಹೊಂದಿದ್ದ
940 ದಿನಗಳ
ನಿರಂತರ ವಿದ್ಯುತ್ ಉತ್ಪಾದನೆ ದಾಖಲೆಯನ್ನು ಮೀರಿಸಿ ಸತತ ಕಾರ್ಯಾಚರಣೆಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ.
* ನಿರ್ಮಾಣ ಹಂತದಲ್ಲೇ ಗುಮ್ಮಟ ಕುಸಿತದಿಂದ ಹಲವರು ಸುರಕ್ಷತೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರೂ, ನಂತರ ಪುನರ್ನಿರ್ಮಾಣ ಮತ್ತು ತಾಂತ್ರಿಕ ಸುಧಾರಣೆಗಳ ನೆರವಿನಿಂದ ಘಟಕವು ಸುರಕ್ಷಾ ಮಾನದಂಡಗಳನ್ನು ಬಲಪಡಿಸಿತು. ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ಘಟಕವನ್ನು ಲೋಕಾರ್ಪಣೆ ಮಾಡಿದ್ದರು. ಇದೀಗ ಅದೇ ಘಟಕ ಭಾರತೀಯ ಅಣುಶಕ್ತಿ ಸಾಮರ್ಥ್ಯದ ಚಿಹ್ನೆಯಾಗಿದೆ.
* ಇದು ಎರಡು ದಶಕಗಳ ಹಿಂದೆ ಭಾರತದಲ್ಲಿ ಅಣು ವಿದ್ಯುತ್ ಸ್ಥಾವರಗಳ ವಿರುದ್ಧ ಪ್ರತಿಭಟನೆಗಳು, ವಿದೇಶಿ ತಂತ್ರಜ್ಞಾನದ ಅವಲಂಬನೆ ಹಾಗೂ ಸುರಕ್ಷತಾ ಕಳವಳಗಳು ದೊಡ್ಡ ಅಡೆತಡೆಯಾಗಿದ್ದವು. ಆದರೆ ಇಂದು ಭಾರತವು ಸ್ವದೇಶಿ ತಂತ್ರಜ್ಞಾನ ಮತ್ತು ಅನುಭವದೊಂದಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ.
* ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಂಭವಿಸುತ್ತಿರುವ ಭೂಕುಸಿತ, ಪ್ರವಾಹಗಳಂತಹ ಪ್ರಾಕೃತಿಕ ವಿಪತ್ತುಗಳು ಕೈಗಾ ಪ್ರದೇಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಗಳ ಸಾಧ್ಯತೆಯನ್ನು ಹೆಚ್ಚಿಸುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು “
ಸಮಯ ರೇಖಾ 2025
” ಎಂಬ ವಿಶೇಷ ಕಾರ್ಯಾಗಾರವನ್ನು ತಜ್ಞರು ನಡೆಸಿದ್ದು, ಇದು ದೇಶದಲ್ಲಿ ಅಣುಸ್ಥಾವರಗಳ ಸುರಕ್ಷತೆಗಾಗಿ ಕೈಗೊಂಡ ಮೊದಲ ಕಾರ್ಯಕ್ರಮವಾಗುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೈಗಾ ಘಟಕದ ಈ ಸಾಧನೆ ಭಾರತವು ಅಣುಶಕ್ತಿ ಕ್ಷೇತ್ರದಲ್ಲಿ ವಿಶ್ವಮಟ್ಟದ ತಂತ್ರಜ್ಞಾನ, ಸುರಕ್ಷತಾ ನಿರ್ವಹಣೆ ಮತ್ತು ನಿರಂತರ ಉತ್ಪಾದನಾ ಸಾಮರ್ಥ್ಯ ಹೊಂದಿರುವುದನ್ನು ಸ್ಪಷ್ಟಪಡಿಸಿದೆ. ಇದು ರಾಷ್ಟ್ರೀಯ ವಿದ್ಯುತ್ ಭದ್ರತೆ ಹಾಗೂ ಜಾಗತಿಕ ಗೌರವಕ್ಕೆ ಹೊಸ ಬಯಲನ್ನು ತೆರೆದಿದೆ.
Take Quiz
Loading...