* ಬಾಂಗ್ಲಾದೇಶದಢಾಕಾದಲ್ಲಿ ನಡೆದ 2025ರ ಮಹಿಳಾ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು (Women's Kabaddi World Cup) ಭಾರತ ಮಹಿಳಾ ಕಬಡ್ಡಿ (India women team) ತಂಡ ಮುಡಿಗೇರಿಸಿಕೊಂಡಿತು. ಆ ಮೂಲಕ ಸತತ ಎರಡನೇ ಬಾರಿ ಕಬಡ್ಡಿ ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತು. * ಸೋಮವಾರ (ನ.24) ನಡೆದಿದ್ದ ಫೈನಲ್ ಪಂದ್ಯದಲ್ಲಿಚೈನೀಸ್ ತೈಪೆ ( Chinese Taipei) ವಿರುದ್ಧ ಭಾರತ ಮಹಿಳಾ ತಂಡ 35-28 ಅಂತರದಲ್ಲಿ ಗೆದ್ದು ಬೀಗಿತು. ಚೈನೀಸ್ ತೈಪೆ ಕೂಡ ಭಾರತದ ಎದುರು ಕಠಿಣ ಪೈಪೋಟಿ ನೀಡಿತ್ತಾದರೂ ಅದನ್ನು ಭಾರತ ವನಿತೆಯರು ಫೈನಲ್ ಪಂದ್ಯದ ಒತ್ತಡವನ್ನು ಮೆಟ್ಟಿ ನಿಂತು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.* ಗುಂಪು ಹಂತದ ನಾಲ್ಕೂ ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್ಗೆ ಲಗ್ಗೆ ಇಟ್ಟಿತ್ತು. ಅಂತಿಮ ನಾಲ್ಕರ ಪಂದ್ಯದಲ್ಲಿ ಇರಾನ್ ವಿರುದ್ಧ ಭಾರತ ಮಹಿಳಾ ತಂಡ 33-21 ಅಂತರಲ್ಲಿ ಗೆದ್ದು ಬೀಗಿತ್ತು. * ಆ ಮೂಲಕ ಭಾರತ ಮಹಿಳಾ ತಂಡ ಫೈನಲ್ಗೆ ಪ್ರವೇಶ ಮಾಡಿತ್ತು. ಭಾರತ ತಂಡದ ಪರ ಚೈನೀಸ್ ತೈಪೆ ಕೂಡ ಅಜೇಯವಾಗಿ ಫೈನಲ್ಗೆ ಬಂದಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ವಿರುದ್ಧ ಚೈನೀಸ್ ತೈಪೆ ತಂಡ 25-18ರ ಅಂತರದಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೆ ಬಂದಿತ್ತು.* ಈ ಬಾರಿಯ ಮಹಿಳಾ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 11 ದೇಶಗಳು ಭಾಗವಹಿಸಿದ್ದು, ಕ್ರೀಡೆಯ ತ್ವರಿತ ಅಂತಾರಾಷ್ಟ್ರೀಯ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.* ಭಾರತ ಹಾಗೂ ಚೈನೀಸ್ ತೈಪೆ ತಂಡಗಳ ನಡುವಣ ಫೈನಲ್ ಪಂದ್ಯವು ತೀವ್ರ ಪೈಪೋಟಿಯಿಂದ ಕೂಡಿತ್ತು, ಆರಂಭಿಕ ಹಂತಗಳಲ್ಲಿ ಚೈನೀಸ್ ತೈಪೆ ಭಾರತದ ರಕ್ಷಣೆಗೆ ಸವಾಲು ಹಾಕಿತು. ಆದಾಗ್ಯೂ, ಪಂದ್ಯದ ನಿರ್ಣಾಯಕ ಕ್ಷಣಗಳಲ್ಲಿ ಹಿಡಿತವನ್ನು ಕಾಯ್ದುಕೊಂಡು ಶಿಸ್ತುಬದ್ಧ ಟ್ಯಾಕಲ್ಗಳು ಮತ್ತು ಸಮಯೋಚಿತ ದಾಳಿಗಳ ಮೂಲಕ ಭಾರತ ಕ್ರಮೇಣ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿತು.* ವಿಶ್ವ ಕಪ್ ಗೆದ್ದ ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. 2025 ರ ಕಬಡ್ದಿ ವಿಶ್ವ ಕಪ್ ಗೆದ್ದು ದೇಶ ಹೆಮ್ಮೆಪಡುವಂತೆ ಮಾಡಿದಭಾರತ ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ. ಈ ಗೆಲುವು ಅಸಂಖ್ಯಾತ ಯುವ ಮನಸ್ಸುಗಳು ಕಬಡ್ಡಿಯಲ್ಲಿ ತೊಡಗಿಕೊಳ್ಳಲು ಮತ್ತು ಉನ್ನತ ಗುರಿಯನ್ನು ಸಾಧಿಸಲು ಸ್ಫೂರ್ತಿ ನೀಡಲಿದೆ ಎಂದು ಮೋದಿ ಎಕ್ಸ್ ನಲ್ಲಿ ಬರೆದಿದ್ದಾರೆ.