* ಐಎನ್ಎಸ್ ತುಶಿಲ್, ಭಾರತೀಯ ನೌಕಾಪಡೆಯ ಹೊಸ ಸ್ಟೆಲ್ತ್ ಕ್ಷಿಪಣಿ ಫ್ರಿಗೇಟ್ ಕಾರವಾರಕ್ಕೆ ಆಗಮಿಸಿದ್ದು, 12,500 ನಾಟಿಕಲ್ ಮೈಲ್ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.* ಈ ಯುದ್ಧನೌಕೆ 2024 ಡಿಸೆಂಬರ್ 18ರಂದು ರಷ್ಯಾದ ಕಲಿನಿಂಗ್ಗ್ರಾಡ್ನಿಂದ ಹೊರಟು, ಮೂರು ಖಂಡಗಳ ಎಂಟು ದೇಶಗಳಿಗೆ ಭೇಟಿ ನೀಡಿ, ಭಾರತದ ಸಮುದ್ರಶಕ್ತಿ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಿದೆ.* ಈ ನೌಕೆ ಬಾಲ್ಟಿಕ್ ಸಮುದ್ರ, ಉತ್ತರ ಸಮುದ್ರ, ಅಟ್ಲಾಂಟಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರವನ್ನು ದಾಟಿ, ಪ್ರಬಲ ನೌಕಾ ತಂತ್ರಜ್ಞಾನವನ್ನು ಪ್ರದರ್ಶಿಸಿದೆ.* ಯೂರೋಪ್, ಆಫ್ರಿಕಾ ಮತ್ತು ಏಷ್ಯಾದ ನೌಕಾಪಡೆಯೊಂದಿಗೆ ಸಮುದ್ರ ವ್ಯಾಯಾಮ ಮತ್ತು ರಾಜತಾಂತ್ರಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಮಾರಿಟೈಮ್ ಡಿಪ್ಲೊಮಸಿಗೆ ಮತ್ತಷ್ಟು ಬಲ ನೀಡಿದೆ.* INS ತುಶಿಲ್ ಪ್ರಾಜೆಕ್ಟ್ 1135.6 ಅಡಿಯಲ್ಲಿ ನಿರ್ಮಿತ ಕ್ರಿವಾಕ್ III ವರ್ಗದ ನೌಕೆ ಆಗಿದ್ದು, ಬ್ರಹ್ಮೋಸ್ ಕ್ಷಿಪಣಿ, ಶ್ಟಿಲ್ ಏರ್ ಮಿಸೈಲ್ ಹಾಗೂ ಅಪಗ್ರೇಡ್ ಮಾಡಿದ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆ ಹೊಂದಿದೆ.* ಇದು ಭಾರತೀಯ ನೌಕಾಪಡೆಯ ಪಶ್ಚಿಮ ತೂಕಡಿಗೆ ಶಕ್ತಿ ನೀಡಲಿದ್ದು, ಭಾರತ-ರಷ್ಯಾ ರಕ್ಷಣಾ ಸಹಕಾರದ ಒಂದು ಮಹತ್ವದ ಹೆಜ್ಜೆಯಾಗಿದೆ.* 2016ರ $2.5 ಬಿಲಿಯನ್ ಒಪ್ಪಂದದಡಿ ರಷ್ಯಾದಲ್ಲಿ ನಿರ್ಮಿತ INS ತುಶಿಲ್ ಮತ್ತು ಭವಿಷ್ಯದ INS ತಮಾಲ್ ಹೊರತುಪಡಿಸಿ, ಉಳಿದ ಎರಡು ಫ್ರಿಗೇಟ್ಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು. ಇದರಿಂದ ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೂ ಬಲ ದೊರಕಲಿದೆ.