Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕಾರ್ಬನ್ ತೆರಿಗೆ ಹೊಡೆತ: CBAM ನೀತಿಯಿಂದ ಭಾರತೀಯ ರಫ್ತು ವಲಯ ಆತಂಕ
1 ಜನವರಿ 2026
* ಭಾರತದ ರಫ್ತು ಮಾರುಕಟ್ಟೆಯಲ್ಲಿ ಉಕ್ಕು ಮತ್ತು ಅಲ್ಯೂಮಿನಿಯಂ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, 2026ರ ಜನವರಿ 1ರಿಂದ ಯೂರೋಪಿಯನ್ ಒಕ್ಕೂಟವು (EU) ಜಾರಿಗೆ ತರುತ್ತಿರುವ
ಕಾರ್ಬನ್ ಬಾರ್ಡರ್ ಅಡ್ಜಸ್ಟ್ಮೆಂಟ್ ಮೆಕಾನಿಸಂ (CBAM)
ಎಂಬ ಹೊಸ ನಿಯಮವು ಭಾರತೀಯ ರಫ್ತುದಾರರಲ್ಲಿ ಆತಂಕ ಮೂಡಿಸಿದೆ. ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (GTRI) ವರದಿಯ ಪ್ರಕಾರ, ಈ ನೀತಿಯಿಂದಾಗಿ ಭಾರತೀಯ ಉತ್ಪನ್ನಗಳ ಬೆಲೆ ಹೆಚ್ಚಾಗಿ, ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಕಡಿಮೆಯಾಗುವ ಭೀತಿ ಎದುರಾಗಿದೆ.
*
CBAM
ಎನ್ನುವುದು ಯೂರೋಪಿಯನ್ ಒಕ್ಕೂಟವು ತನ್ನೊಳಗಿನ ಉದ್ಯಮಗಳಿಗೆ ಸಮಾನವಾದ ಕಾರ್ಬನ್ ವೆಚ್ಚವನ್ನು ಹೊರಗಿನ ದೇಶಗಳಿಂದ ಆಮದು ಆಗುವ ಸರಕುಗಳ ಮೇಲೂ ವಿಧಿಸುವ ವ್ಯವಸ್ಥೆಯಾಗಿದೆ. ಉದ್ದೇಶ – ಕಾರ್ಬನ್ ಉತ್ಸರ್ಗವನ್ನು ಕಡಿಮೆ ಮಾಡುವುದು ಹಾಗೂ “ಕಾರ್ಬನ್ ಲೀಕೆಜ್” ಅನ್ನು ತಡೆಯುವುದು.
* ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ಪರಿಣಾಮ :
ಕೆಳಗಿನ ಕಾರಣಗಳಿಂದ ಭಾರತೀಯ ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲೆ
CBAM ವೆಚ್ಚ
ಹೆಚ್ಚಾಗುತ್ತದೆ.
#
ಉಕ್ಕು ಉತ್ಪಾದನೆ
:
=> Blast Furnace–Basic Oxygen Furnace (BF–BOF) ವಿಧಾನದಲ್ಲಿ ಕಾರ್ಬನ್ ಉತ್ಸರ್ಗ ಅತ್ಯಧಿಕ
=> ಗ್ಯಾಸ್ ಆಧಾರಿತ DRI ನಲ್ಲಿ ಮಧ್ಯಮ
=> ಸ್ಕ್ರಾಪ್ ಆಧಾರಿತ Electric Arc Furnace (EAF) ನಲ್ಲಿ ಅತಿ ಕಡಿಮೆ
#
ಅಲ್ಯೂಮಿನಿಯಂ ಉತ್ಪಾದನೆ
:
=> ಬಳಸುವ ವಿದ್ಯುತ್ ಮೂಲ ಅತ್ಯಂತ ಮುಖ್ಯ
=> ಕಲ್ಲಿದ್ದಲು ಆಧಾರಿತ ವಿದ್ಯುತ್ ಬಳಕೆ ಕಾರ್ಬನ್ ಹೊರೆಯನ್ನು ಬಹಳಷ್ಟು ಹೆಚ್ಚಿಸುತ್ತದೆ
* ರಫ್ತುದಾರರ ಮೇಲೆ ಹೊರೆ :
CBAM ತೆರಿಗೆಯನ್ನು ಯೂರೋಪಿಯನ್ ಆಮದುದಾರರು ನೇರವಾಗಿ ಪಾವತಿಸಬೇಕಾದರೂ, ಅದರ ವೆಚ್ಚವನ್ನು ಭಾರತೀಯ ರಫ್ತುದಾರರ ಮೇಲೆ ಒತ್ತಡವಾಗಿ ತಳ್ಳಲಾಗುತ್ತದೆ ಪರಿಣಾಮವಾಗಿ, ಭಾರತೀಯ ರಫ್ತುದಾರರು ತಮ್ಮ ಉತ್ಪನ್ನಗಳ ಬೆಲೆಯನ್ನು
ಶೇ.15–22ರಷ್ಟು
ಕಡಿತಗೊಳಿಸುವ ಅಗತ್ಯ ಎದುರಾಗಬಹುದು
* ಸಣ್ಣ ರಫ್ತುದಾರರಿಗೆ ಸಂಕಷ್ಟ :
GTRI ಪ್ರಕಾರ, CBAM ನ
ಸಂಕೀರ್ಣ ಡೇಟಾ ಸಂಗ್ರಹ ಮತ್ತು ಪರಿಶೀಲನಾ ನಿಯಮಗಳು
ಸಣ್ಣ ಮತ್ತು ಮಧ್ಯಮ ಮಟ್ಟದ ರಫ್ತುದಾರರಿಗೆ ದೊಡ್ಡ ಸವಾಲಾಗಲಿವೆ. ಪ್ರತಿ ಕಾರ್ಖಾನೆ ಮಟ್ಟದಲ್ಲಿ ಕಾರ್ಬನ್ ಉತ್ಸರ್ಗ ಲೆಕ್ಕಾಚಾರ, ಇಂಧನ ಬಳಕೆ, ವಿದ್ಯುತ್ ಬಳಕೆ, ಉತ್ಪಾದನಾ ಪ್ರಮಾಣ, ಉತ್ಸರ್ಗ ಗುಣಾಂಕಗಳ ತ್ರೈಮಾಸಿಕ ದಾಖಲೆ, ಈ ಎಲ್ಲವು
ಅನುಸರಣೆ ವೆಚ್ಚವನ್ನು ಹೆಚ್ಚಿಸಿ
, ಹಲವಾರು ಸಣ್ಣ ರಫ್ತುದಾರರು ಇಯು ಮಾರುಕಟ್ಟೆಯಿಂದ ಹೊರಬರುವ ಪರಿಸ್ಥಿತಿ ಉಂಟಾಗಬಹುದು.
* CBAM ಒಂದು ಸಾಮಾನ್ಯ ಪರಿಸರ ನೀತಿ ಮಾತ್ರವಲ್ಲ; ಇದು
ಉತ್ಪಾದನಾ ಘಟಕ ಮಟ್ಟದ ಕಾರ್ಬನ್ ಲೆಕ್ಕಪತ್ರ ವ್ಯವಸ್ಥೆ
. ಭವಿಷ್ಯದಲ್ಲಿ ಇಯು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರಲು, ಭಾರತೀಯ ಉಕ್ಕು ಮತ್ತು ಅಲ್ಯೂಮಿನಿಯಂ ಉದ್ಯಮಗಳು: ಕಡಿಮೆ ಕಾರ್ಬನ್ ತಂತ್ರಜ್ಞಾನಗಳತ್ತ ಸಾಗುವುದು, ಶುದ್ಧ ವಿದ್ಯುತ್ ಬಳಕೆ ಹೆಚ್ಚಿಸುವುದು ಮತ್ತು ನಿಖರ ಉತ್ಸರ್ಗ ಲೆಕ್ಕಾಚಾರ ವ್ಯವಸ್ಥೆ ಅಳವಡಿಸುವುದು ಅತ್ಯಾವಶ್ಯಕವಾಗಲಿದೆ.
Take Quiz
Loading...