* ರಾಜ್ಯದ ಹೆಡ್ ಕಾನ್ಸ್ಟೆಬಲ್ಗಳು ಹಾಗೂ ಕಾನ್ಸ್ಟೆಬಲ್ಗಳು ಧರಿಸುತ್ತಿದ್ದ ಸ್ಲೋಚ್ ಟೋಪಿಗೆ ಸರ್ಕಾರ ಇನ್ನು ಮುಕ್ತಾಯ ಹೇಳಲು ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ‘ನೇವಿ ಬ್ಲೂ ಪೀಕ್ ಕ್ಯಾಪ್’ ವಿತರಿಸಲು ಅನುಮತಿ ನೀಡಲಾಗಿದೆ.* ನೂತನ ಟೋಪಿಗಳ ಖರೀದಿಗೆ ಅಗಸ್ಟ್ 7ರಂದು ಕಿಟ್ ನಿರ್ದಿಷ್ಟತಾ ಸಮಿತಿ ಸಭೆ ಕರೆಯಲಾಗಿದೆ. ಈ ಸಭೆ ಎಡಿಜಿಪಿ ಉಮೇಶ್ ಕುಮಾರ್ ನೇತೃತ್ವದಲ್ಲಿ ನಡೆಯಲಿದೆ.* ಇದುವರೆಗೆ ಬಳಸುತ್ತಿದ್ದ ಸ್ಲೋಚ್ ಕ್ಯಾಪ್ ಬದಲಾಗಿ ಈಗ ನೌಕಾಪಡೆ ಮತ್ತು ಇತರೆ ರಾಜ್ಯಗಳ ಪೊಲೀಸ್ಗಳು ಬಳಸುವ ಮಾದರಿಯ ಟೋಪಿ ಅಳವಡಿಸಲಾಗುತ್ತಿದೆ.* ಜೂನ್ 16ರಂದು ನಡೆದ ವಾರ್ಷಿಕ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಅವರು ಟೋಪಿ ಬದಲಾವಣೆಗೆ ಒಲವು ತೋರಿದ್ದರು.* ಕೆಲ ಐಪಿಎಸ್ ಅಧಿಕಾರಿಗಳ ವಿರೋಧದ ನಂತರ, ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ವರದಿ ನೀಡಲಾಗಿದೆ.