* ಹಲವು ತಿಂಗಳಿನಿಂದ ಖಾಲಿ ಇದ್ದ ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದ ಶಿಫಾರಸಿನ ಮೇರೆಗೆ ಸರ್ಕಾರದಿಂದ ಭಾನುವಾರ ನಾಮನಿರ್ದೇಶನ ಪ್ರಕಟವಾಯಿತು.* ಆರತಿ ಕೃಷ್ಣ, ರಮೇಶ್ ಬಾಬು, ಎಫ್.ಎಚ್. ಜಕ್ಕಪ್ಪನವರ್ ಮತ್ತು ಶಿವಕುಮಾರ್ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಲಾಗಿದೆ.* ರಮೇಶ್ಬಾಬು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದು, ಆರತಿ ಕೃಷ್ಣ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಅಧ್ಯಕ್ಷೆ. ಜಕ್ಕಪ್ಪನವರ್ ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ, ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಪತ್ರಕರ್ತ.* ಹಿಂದಿನ ಸದಸ್ಯರಾದ ಕಾಂಗ್ರೆಸ್ನ ಯು.ಬಿ. ವೆಂಕಟೇಶ್ ಹಾಗೂ ಪ್ರಕಾಶ್ ಕೆ. ರಾಥೋಡ್ ಅವರ ಅವಧಿ 2024 ಅಕ್ಟೋಬರ್ನಲ್ಲಿ ಮುಗಿಯಿತು.* ಜೆಡಿಎಸ್ನ ಕೆ.ಎ. ತಿಪ್ಪೇಸ್ವಾಮಿ ಅವಧಿ 2025 ಜನವರಿಯಲ್ಲಿ ಅಂತ್ಯಗೊಳ್ಳುತ್ತದೆ. ಸಿ.ಪಿ. ಯೋಗೇಶ್ವರ್ ಉಪಚುನಾವಣೆಗೆ ಸ್ಪರ್ಧಿಸಲು ರಾಜೀನಾಮೆ ನೀಡಿದ್ದರು.* ನಾಲ್ವರಲ್ಲಿ ಆರತಿ ಕೃಷ್ಣ ಒಕ್ಕಲಿಗ ಸಮುದಾಯಕ್ಕೆ, ರಮೇಶ್ ಬಾಬು ಹಿಂದುಳಿದ ವರ್ಗಕ್ಕೆ, ಜಕ್ಕಪ್ಪನವರ್ ಮತ್ತು ಶಿವಕುಮಾರ್ ದಲಿತ ಬಲಗೈ ಸಮುದಾಯಕ್ಕೆ ಸೇರಿದವರು.