* ಭಾರತ ಸರ್ಕಾರ ಮೊದಲಬಾರಿಗೆ ತನ್ನ ದೇಶದ ಹುಲಿಗಳನ್ನು ವಿದೇಶಕ್ಕೆ ಕಳುಹಿಸಲು ಮುಂದಾಗಿದ್ದು, 2016ರಲ್ಲಿ ಸಂಪೂರ್ಣವಾಗಿ ನಾಶವಾದ ಕಾಂಬೋಡಿಯಾದ ಹುಲಿ ಸಂತತಿಯನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ 6 ಹುಲಿಗಳನ್ನು ಕಳುಹಿಸಲು ತೀರ್ಮಾನಿಸಿದೆ.* ಮಹಾರಾಷ್ಟ್ರ ಮತ್ತು ಕರ್ನಾಟಕದ ಮೀಸಲು ಅರಣ್ಯಗಳಲ್ಲಿ ದೊರೆಯುವ ಹುಲಿಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಲಾಗುತ್ತದೆ. ಕನ್ಹಾ, ಬಾಂಧವಗಢ ಮತ್ತು ಪೆಂಚ್ ರಾಷ್ಟ್ರೀಯ ಉದ್ಯಾನಗಳಿಂದ ಸಹ ಹುಲಿಗಳನ್ನು ಕಳುಹಿಸುವ ಸಾಧ್ಯತೆ ಇದೆ.* ಈ ಹಿಂದೆ 2009ರಲ್ಲಿ ಪನ್ನಾ ಮೀಸಲು ಅರಣ್ಯದಿಂದ ಭಾರತದಲ್ಲಿ ಹುಲಿ ಸ್ಥಳಾಂತರ ಯಶಸ್ವಿಯಾಗಿ ನಡೆದಿದ್ದು, ವಿದೇಶಕ್ಕೆ ಕಳುಹಿಸುವುದು ಇದೇ ಮೊದಲು.* ಸದ್ಯ ಭಾರತ ಮತ್ತು ಕಾಂಬೋಡಿಯಾದ ಅರಣ್ಯ ಪರಿಸ್ಥಿತಿಯ ಅಧ್ಯಯನ ನಡೆಯುತ್ತಿದ್ದು, ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಸ್ಥಳಾಂತರ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ.