* 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಗೆದ್ದ ಭಾರತದ ಮಿಶ್ರ ತಂಡದ ಸದಸ್ಯ ಬಿ.ಸುಮೀತ್ ರೆಡ್ಡಿ ಬ್ಯಾಡ್ಮಿಂಟನ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಕೋಚಿಂಗ್ಗೆ ಒಲವು ತೋರಿ ಈ ಅನುಭವಿ ಡಬಲ್ಸ್ ಆಟಗಾರ ಈ ನಿರ್ಧಾರ ಕೈಗೊಂಡಿದ್ದಾರೆ.* 33 ವರ್ಷದ ಸುಮೀತ್ 2015ರಲ್ಲಿ ಮನು ಅತ್ರಿ ಜೊತೆಯಲ್ಲಿ ವೃತ್ತಿಜೀವನದ ಶ್ರೇಷ್ಠ 17ನೇ ಸ್ಥಾನವನ್ನು ಮುಟ್ಟಿದರು.* 2016ರ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ ಈ ಜೋಡಿ, ರಿಯೊ ಒಲಿಂಪಿಕ್ಸ್ಗಾಗಿ ಅರ್ಹತೆ ಪಡೆದಿತ್ತು. ಹೈದರಾಬಾದ್ನಲ್ಲಿ ನಡೆದ ಏಷ್ಯಾ ತಂಡ ಚಾಂಪಿಯನ್ಷಿಪ್ನಲ್ಲಿ ಕಂಚು ಪಡೆದ ಭಾರತ ಪುರುಷರ ತಂಡದ ಭಾಗವಾಗಿದ್ದರು.* 2014 ಮತ್ತು 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಸುಮೀತ್, 2015ರ ಮೆಕ್ಸಿಕೊ ಸಿಟಿ ಗ್ರ್ಯಾಂಡ್ಪ್ರಿ ಮತ್ತು 2016ರ ಕೆನಡಾ ಓಪನ್ನಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು.* 2015ರಲ್ಲಿ ಅಮೆರಿಕ ಓಪನ್ ಮತ್ತು ಡಚ್ ಓಪನ್ನಲ್ಲಿ ರನ್ನರ್ ಅಪ್ ಆಗಿದ್ದರು. 2017ರ ಸೈಯದ್ ಮೋದಿ ಇಂಟರ್ನ್ಯಾಷನಲ್ನಲ್ಲಿ ಅಶ್ವಿನಿ ಪೊನ್ನಪ್ಪ ಜೊತೆಗೂಡಿ ರನ್ನರ್ ಅಪ್ ಆಗಿದ್ದರು.