* ಅಸ್ಸಾಂನ ರಾಷ್ಟ್ರೀಯ ಅಭಯಾರಣ್ಯ ಕಾಜಿರಂಗದಲ್ಲಿ ನವೆಂಬರ್ 26 ರಿಂದ 29ರವರೆಗೆ 12 ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮಾರ್ಟ್ (ಐಟಿಎಂ) ನಡೆಯಿತು.* ಪ್ರವಾಸೋದ್ಯಮ ಸಚಿವಾಲಯ ಈ ಪ್ರದೇಶದ ಪ್ರವಾಸೋದ್ಯಮದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಮತ್ತು ಈಶಾನ್ಯ ಭಾರತದ ಪ್ರವಾಸೋದ್ಯಮ ವ್ಯವಹಾರಗಳನ್ನು ಸಂಪರ್ಕಿಸುವ ಗುರಿಯೊಂದಿಗೆ ಪ್ರತಿವರ್ಷ ಐಟಿಎಂ ಅನ್ನು ಆಯೋಜಿಸುತ್ತದೆ.* ಪ್ರದೇಶದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಪ್ರದರ್ಶಿಸಲು ಪ್ರವಾಸೋದ್ಯಮ ಸಚಿವಾಲಯವು ಈ ಮಾರ್ಟ್ ಅನ್ನು ಆಯೋಜಿಸುತ್ತು.* ಈ ವರ್ಷದ ಕಾರ್ಯಕ್ರಮ ಸುಸ್ಥಿರತೆಯನ್ನು ಆಧರಿಸಿದ್ದು, ಪ್ರವಾಸೋದ್ಯಮ ಸಚಿವಾಲಯದ 'ಟ್ರಾವೆಲ್ ಫಾರ್ ಲೈಫ' ಉಪಕ್ರಮದೊಂದಿಗೆ ಸಂಯೋಜಿಸಲಾಗಿತ್ತು.* ಖರೀದಿದಾರರು, ಮಾರಾಟಗಾರರು ಮತ್ತು ಮಾಧ್ಯಮ ಸೇರಿದಂತೆ ವಿವಿಧ ಪಾಲುದಾರರ ನಡುವೆ ಪಾಲುದಾರಿಕೆಯನ್ನು ಉತ್ತೇಜಿಸಿತು.* ಒಂದು ಕೊಂಬಿನ ಘೇಂಡಾಮೃಗಗಳಿಗೆ ನೆಲೆಯಾಗಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.