* ಫೈರ್ಸ್ಯಾಟ್ ಯೋಜನೆಯಡಿ ಪ್ರಥಮ ಉಪಗ್ರಹವನ್ನು ಗೂಗಲ್ ಇತ್ತೀಚೆಗೆ ಉಡಾಯಿಸಿದೆ.* ಅದು ಭೂಮಿಯ ಕೆಳ ಕಕ್ಷೆಯನ್ನು (ಲೋವರ್ ಅರ್ಬಿಟ್) ಯಶಸ್ವಿಯಾಗಿ ಪ್ರವೇಶಿಸಿದೆ. 50ಕ್ಕೂ ಹೆಚ್ಚು ಉಪಗ್ರಹಗಳ ಸಮೂಹವನ್ನು ಸೃಷ್ಟಿಸುವುದು ಗೂಗಲ್ನ ಫೈರ್ಸ್ಯಾಟ್ ಯೋಜನೆಯ ಉದ್ದೇಶವಾಗಿದೆ.* ಅವುಗಳು ಕೃತಕ ಬುದ್ಧಿಮತ್ತೆಯನ್ನು ಬಳಸಿ 5x5 ಮೀಟರ್ನಷ್ಟು ಚಿಕ್ಕ ಗಾತ್ರದ ಕಾಡ್ಲಿಚ್ಚನ್ನೂ ಪತ್ತೆ ಹಚ್ಚಲಿವೆ.* ಕಾಡಿಚ್ಚುಗಳನ್ನು ತುಂಬಾ ಮು೦ಚಿತವಾಗಿಯೇ ಪತ್ತೆಹಚ್ಚುವ ಸಾಮರ್ಥ್ಯವನ್ನು ವೃದ್ಧಿಸುವಂತೆ ಫೈರ್ಸ್ಯಾಟ್ಅನ್ನು ವಿನ್ಯಾಸಗೊಳಿಸಲಾಗಿದೆ.* ಕ್ಯಾಲಿಫೋರ್ನಿಯಾದ ಏರೋಸ್ಪೇಸ್ ಸ್ಟಾರ್ಟಪ್ ಮುವಾನ್ ಸ್ಪೇಸ್ ಈ ಮೊದಲ ಉಪಗ್ರಹವನ್ನು ನಿರ್ಮಿಸಿದೆ. ಅದು ಆರು-ಬ್ಯಾಂಡ್ ಮಲ್ಟಿಸ್ಪೆಕ್ಟಲ್ ಇನ್ಫ್ರಾರೆಡ್ ಕ್ಯಾಮರಾಗಳಿಂದ ಸಜ್ಜುಗೊಂಡಿದೆ.* ನಿರ್ದಿಷ್ಟವಾಗಿ ಕಾಡ್ಲಿಚ್ಚುಗಳ ಬಿಸಿಯ ಸುಳಿವನ್ನು (ಹೀಟ್ ಸಿಗ್ನಚರ್) ಗಣನೀಯ ದೂರದಿಂದ ಪತ್ತೆ ಹಚ್ಚಲು ಸಾಧ್ಯವಾಗುವಂತೆ ಅದನ್ನು ವಿಶೇಷವಾಗಿ ನಿರ್ಮಿಸಲಾಗಿದೆ.* ಫೈರ್ಸ್ಯಾಟ್ ಉಪಕ್ರಮ, ಗೂಗಲ್ ರೀಸರ್ಚ್, ಮುವಾನ್ ಸ್ಪೇಸ್, ಅರ್ಥ್ ಫೈರ್ ಅಲಯನ್ಸ್ ಮತ್ತು ಮೂರ್ ಫೌಂಡೇಷನ್ ಪಾಲುದಾರರು. ಗೂಗಲ್ ಆರ್ಗ್ 13 ದಶಲಕ್ಷ ಡಾಲರ್ ನೆರವು ನೀಡಿದ್ದು, ಉಪಗ್ರಹಗಳ ಗುಚ್ಛ ಮತ್ತು ಎಐ ತಂತ್ರಜ್ಞಾನದಿಂದ ಕಾಡಿಚ್ಚುಗಳ ಮೇಲಿನ ನಿಗಾವಳಿ ಸುಧಾರಿಸುವ ಉದ್ದೇಶವಿದೆ.