* ಚೆನ್ನೈನ ಕೇರ್ ಅರ್ಥ್ ಟ್ರಸ್ಟ್ನ ಸಹಸ್ಥಾಪಕಿ ಜಯಶ್ರೀ ವೆಂಕಟೇಶನವರು "ಜೌಗುಪ್ರದೇಶದ ಬುದ್ಧಿವ೦ತ ಬಳಕೆಗಾಗಿ"(‘ವೆಟ್ಲ್ಯಾಂಡ್ ವೈಸ್ ಯೂಸ್’) ರಾಮ್ಸಾರ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರಾಗಿದ್ದಾರೆ.* ಇದು ಜೌಗು ಪ್ರದೇಶಗಳ ಸುಸ್ಥಿರ ನಿರ್ವಹಣೆಗೆ ನೀಡಿದ ಕೊಡುಗೆಗಳನ್ನು ಆಚರಿಸುವ ಜಾಗತಿಕವಾಗಿ ಗುರುತಿಸಲ್ಪಟ್ಟ ಪ್ರಶಸ್ತಿಯಾಗಿದೆ.* ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನಾದಿನದಲ್ಲಿ (ಶುಕ್ರವಾರ), ಜೆನೀವಾದಲ್ಲಿ ರಾಮ್ಸಾರ್ ಕಾರ್ಯದರ್ಶಿಯು ಘೋಷಿಸಿದಂತೆ, ಜಯಶ್ರೀ ಅವರು ಜಗತ್ತಿನ 12 ಮಹಿಳಾ ಪರಿವರ್ತಕರಲ್ಲಿ ಒಬ್ಬರು. ಮೂರು ವಿಭಾಗಗಳಲ್ಲಿಯೂ, ಜಯಶ್ರೀ ಅವರನ್ನು 'ಜಲಾಶಯಗಳ ವಿವೇಕ ಬುದ್ಧಿಯುತ ಬಳಕೆ' ವಿಭಾಗದಲ್ಲಿ ಗೌರವಿಸಲಾಯಿತು.* ಜಯಶ್ರೀ ದಶಕಗಳ ಸಮರ್ಪಣೆಯೊಂದಿಗೆ ಚೆನ್ನೈನ ಪಲ್ಲಿಕರಣೈ ಸೇರಿ ಭಾರತದ ಜೌಗು ಪ್ರದೇಶಗಳನ್ನು ಸಂರಕ್ಷಿಸಲು ಮುಂಚೂಣಿಯಲ್ಲಿದ್ದಾರೆ. ಅವರ ಪ್ರಯಾಣ 350 ಡಾಲರ್ ದೇಣಿಗೆ ಮತ್ತು ಜೌಗು ಪ್ರದೇಶಗಳ ರಕ್ಷಣಾ ಸಂಕಲ್ಪದಿಂದ ಪ್ರಾರಂಭವಾಯಿತು.