* ವಿಶ್ವ ಪರಿಸರ ದಿನ(world environment day)ವನ್ನು ಪ್ರತಿ ವರ್ಷ ಜೂನ್ 5ರಂದು ಆಚರಿಸಲಾಗುತ್ತದೆ. ಈ ವರ್ಷ ಪರಿಸರ ದಿನಾಚರಣೆಯ 50ನೇ ವಾರ್ಷಿಕೋತ್ಸವಾಗಿದೆ. * 2023 ಥೀಮ್: “ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು”* ಪರಿಸರ ಸಂರಕ್ಷಣೆಯ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ವಿಶೇಷ ದಿನ ಇದಾಗಿದೆ. ಪರಿಸರ ರಕ್ಷಣೆಗೆ ಜನರನ್ನು ಪ್ರೇರೇಪಣೆಗೊಳಿಸಲಾಗುತ್ತದೆ. ಪರಿಸರ ಸಂರಕ್ಷಣೆ ಮತ್ತು ಜನ ಜಾಗೃತಿಗೆ ಹಲವಾರು ವಿಧಾನಗಳು ಮತ್ತು ಥೀಮ್ಗಳು ಇವೆ. ಈ ವರ್ಷ ಪರಿಸರ ದಿನಾಚರಣೆಯ 50ನೇ ವಾರ್ಷಿಕೋತ್ಸವಾಗಿದೆ.* ಈ ವರ್ಷ ಪ್ಲಾಸ್ಟಿಕ್ ನಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ಮತ್ತು ಅದನ್ನು ತಪ್ಪಿಸಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಥೀಮ್ ಅನ್ನು ಅಳವಡಿಸಲಾಗಿದೆ.* ಮನುಷ್ಯರು ಪ್ರತಿ ವರ್ಷ 43 ಕೋಟಿ ಟನ್ಗೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತಿದ್ದಾರೆ ಎನ್ನುತ್ತದೆ ವಿಶ್ವಸಂಸ್ಥೆಯ ಪರಿಸರ ಸಂರಕ್ಷಣೆ ಕಾರ್ಯಕ್ರಮದ ವರದಿ, 46% ಪ್ಲಾಸ್ಟಿಕ್ ತ್ಯಾಜ್ಯವನ್ನು ಭೂಮಿಯಲ್ಲಿ ಹೂತು ಹಾಕಲಾಗುತ್ತದೆ. 22% ಅನ್ನು ಸರಿಯಾನಿ ನಿರ್ವಹಿಸದೆ ಬಿಡಲಾಗುತ್ತಿದೆ.