* ಅಂತರರಾಷ್ಟ್ರೀಯ ನಾವಿಕರ ದಿನ ಜೂನ್ 25 ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ದಿನವನ್ನು ನಾವಿಕರು ಹಾಗೂ ಅವರ ಕುಟುಂಬಗಳು ಗೌರವದೊಂದಿಗೆ ಆಚರಿಸುತ್ತಾರೆ.* ಅಂತಾರಾಷ್ಟ್ರೀಯ ನಾವಿಕರ ದಿನ 2025 ರ ಥೀಮ್ : ‘ನನ್ನ ಕಿರುಕುಳ-ಮುಕ್ತ ಹಡಗು’ ಸಮುದ್ರದಲ್ಲಿ ಗೌರವದ ಸಂಸ್ಕೃತಿಯನ್ನು ರೂಪಿಸಲು, ಕಿರುಕುಳ, ಬೆದರಿಕೆ ಮತ್ತು ತಾರತಮ್ಯವಿಲ್ಲದ ಪರಿಸರಕ್ಕಾಗಿ IMO ವತಿಯಿಂದ ಆರಂಭಿಸಲಾದ ಅಭಿಯಾನ.* ಈ ದಿನದ ಉದ್ದೇಶ ನಾವಿಕರು ಸಮುದ್ರಯಾನ ವ್ಯಾಪಾರ ಹಾಗೂ ಜಾಗತಿಕ ಆರ್ಥಿಕತೆಗೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಗುರುತಿಸುವುದಾಗಿದೆ.* ಇಂಟರ್ನ್ಯಾಷನಲ್ ಮ್ಯಾರಿಟೈಮ್ ಆರ್ಗನೈಸೇಶನ್ (IMO) ಈ ದಿನವನ್ನು 2010ರಲ್ಲಿ ಸ್ಥಾಪಿಸಿ, 2011ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು.* ಈ ದಿನ ನಾವಿಕರ ದೈನಂದಿನ ಸವಾಲುಗಳನ್ನು ಎತ್ತಿ ತೋರಿಸಿ, ಸುರಕ್ಷಿತ ಕೆಲಸದ ಪರಿಸರದ ಅವಶ್ಯಕತೆಯನ್ನು ಒತ್ತಿಹೇಳುತ್ತದೆ.* ಹಾಗೇ ನಾವಿಕರ ಹಕ್ಕುಗಳು, ಸುರಕ್ಷತೆ ಹಾಗೂ ಯೋಗಕ್ಷೇಮ ಕುರಿತು ಜಾಗೃತಿ ಮೂಡಿಸಿ ಕ್ರಮ ಕೈಗೊಳ್ಳಲು ಪ್ರೋತ್ಸಾಹ ನೀಡಲಾಗುತ್ತದೆ.* ಜಾಗತಿಕ ವ್ಯಾಪಾರದ ಶೇಕಡಾ 90% ರಷ್ಟು ಸಮುದ್ರ ಸಾರಿಗೆಯ ಮೂಲಕ ಸಾಗುತ್ತದೆ, ಇದನ್ನು ನಿಭಾಯಿಸುವ ನಾವಿಕರ ಕೊಡುಗೆ ಅನನ್ಯವಾಗಿದೆ.