* ಪ್ರತಿ ವರ್ಷ ಈ 'ಸಿಕಲ್ ಸೆಲ್' ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜೂನ್ 19ರಂದು 'ವಿಶ್ವಸಿಕಲ್‌ ಸೆಲ್ ಜಾಗೃತಿ ದಿನ'ವನ್ನಾಗಿ ಘೋಷಿಸಲಾಗಿದೆ.* ದೇಹದ ಕೆಂಪು ರಕ್ತ ಕಣಗಳು ಶೀಘ್ರ ಅವಸಾನಗೊಳ್ಳುವ ಕಾಯಿಲೆಯನ್ನು 'ಸಿಕಲ್ ಸೆಲ್' ಎನ್ನುವರು. ಅನುವಂಶೀಯವಾಗಿ ಬರುವ ಈ ಕಾಯಿಲೆಯಿಂದ ದೇಹಕ್ಕೆ ಆಮ್ಲಜನಕ ಪೂರೈಕೆ ಹಾಗೂ ರಕ್ತ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದು ಕಣ್ಣಿನ ಸಮಸ್ಯೆ, ಪಾರ್ಶ್ವವಾಯು, ಸೋಂಕು ಮತ್ತಿತರ ಗಂಭೀರ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. * 2009 ರಿಂದ ವಿಶ್ವ ಸಂಸ್ಥೆ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನದ ಆಚರಣೆಯನ್ನು ಜಾರಿಗೆ ತಂದಿತು.