* ಪ್ರತಿ ವರ್ಷ ಈ 'ಸಿಕಲ್ ಸೆಲ್' ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜೂನ್ 19ರಂದು 'ವಿಶ್ವಸಿಕಲ್ ಸೆಲ್ ಜಾಗೃತಿ ದಿನ'ವನ್ನಾಗಿ ಘೋಷಿಸಲಾಗಿದೆ.* ದೇಹದ ಕೆಂಪು ರಕ್ತ ಕಣಗಳು ಶೀಘ್ರ ಅವಸಾನಗೊಳ್ಳುವ ಕಾಯಿಲೆಯನ್ನು 'ಸಿಕಲ್ ಸೆಲ್' ಎನ್ನುವರು. ಅನುವಂಶೀಯವಾಗಿ ಬರುವ ಈ ಕಾಯಿಲೆಯಿಂದ ದೇಹಕ್ಕೆ ಆಮ್ಲಜನಕ ಪೂರೈಕೆ ಹಾಗೂ ರಕ್ತ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದು ಕಣ್ಣಿನ ಸಮಸ್ಯೆ, ಪಾರ್ಶ್ವವಾಯು, ಸೋಂಕು ಮತ್ತಿತರ ಗಂಭೀರ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. * 2009 ರಿಂದ ವಿಶ್ವ ಸಂಸ್ಥೆ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನದ ಆಚರಣೆಯನ್ನು ಜಾರಿಗೆ ತಂದಿತು.* 2025 ರ ವಿಶ್ವ 'ಸಿಕಲ್ ಸೆಲ್' ಜಾಗೃತಿ ದಿನದ ಥೀಮ್ ಅನ್ನು ಇನ್ನೂ ಘೋಷಿಸಲಾಗಿಲ್ಲ. * ಅಧಿಕೃತ ಅಂಕಿಅಂಶಗಳು ಮತ್ತು ಮೂಲಗಳ ಪ್ರಕಾರ, ಐದು ವರ್ಷ ತುಂಬುವ ಮೊದಲೇ 1000 ಕ್ಕೂ ಹೆಚ್ಚು ನವಜಾತ ಶಿಶುಗಳು ಈ ಸ್ಥಿತಿಯಿಂದ ಸಾಯುತ್ತವೆ. ಈ ಕಾಯಿಲೆ ಆಫ್ರಿಕಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ವೇಗವಾಗಿ ಹರಡಿದ್ದು, 90,000 ರಿಂದ 100,000 ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ.