* ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ರಕ್ತದಾನದ ಮೂಲಕ ಜೀವಗಳನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.* ವಿಶ್ವ ರಕ್ತದಾನಿಗಳ 2025 ರ ದಿನದ ಥೀಮ್: "ರಕ್ತ ನೀಡಿ, ಭರವಸೆ ನೀಡಿ, ಜೀವವನ್ನು ಉಳಿಸಿ" ಎಂಬುದು ಥೀಮ್ ಆಗಿದೆ.* 2004 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಮೊದಲ ವಿಶ್ವ ರಕ್ತದಾನಿಗಳ ದಿನವನ್ನು ಸ್ಥಾಪಿಸಿತು. ಹಾಗೂ 2005 ರಲ್ಲಿ ವಿಶ್ವ ಆರೋಗ್ಯ ಅಸೆಂಬ್ಲಿಯು ಜೂನ್ 14 ಅನ್ನು ವಿಶ್ವ ರಕ್ತದಾನಿಗಳ ದಿನವೆಂದು ಗೊತ್ತುಪಡಿಸಿತು ಮತ್ತು ಅಂದಿನಿಂದ ವಾರ್ಷಿಕವಾಗಿ ಆಚರಿಸಲಾಗುತ್ತದೆ* ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿ, ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಬ್ಲಡ್ ಡೋನರ್ ಆರ್ಗನೈಸೇಶನ್ ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್ಫ್ಯೂಷನ್ ಸಹಯೋಗದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ದಿನವನ್ನು ಸ್ಮರಿಸುತ್ತದೆ.* 45 ರಿಂದ 60 ಕೆ.ಜಿ. ತೂಕದ ದಾನಿಗಳಿಂದ 350 ಎಂಎಲ್ ರಕ್ತವನ್ನು ಹಾಗೂ 60 ಕೆ.ಜಿ.ಗೂ ಹೆಚ್ಚು ತೂಕ ಹೊಂದಿರುವ ದಾನಿಗಳಿಂದ 450 ಎಂಎಲ್ ರಕ್ತವನ್ನು ದಾನವಾಗಿ ಪಡೆಯಲಾಗುವುದು.* ಲ್ಯಾಂಡ್ಸ್ಟೈನರ್ 1901 ರಲ್ಲಿ ABO ರಕ್ತದ ಗುಂಪುಗಳನ್ನು ಕಂಡುಹಿಡಿದರು, ರಕ್ತದ ಗುಂಪುಗಳ ವರ್ಗೀಕರಣದ ಆಧುನಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು