* ಜುಲೈ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡಾ 1.55ಕ್ಕೆ ಇಳಿಕೆ ಕಂಡಿದೆ. ಇದು 2017ರ ಜೂನ್ನ ನಂತರದ ಎಂಟು ವರ್ಷಗಳ ಕನಿಷ್ಠ ಮಟ್ಟವಾಗಿದ್ದು, 2019ರ ಜನವರಿಯ ನಂತರ ಮೊದಲ ಬಾರಿಗೆ ಆರ್ಬಿಐ ನಿಗದಿ ಮಾಡಿದ ಶೇ 2–4ರ ಗುರಿಗಿಂತ ಕೆಳಗೆ ಬಂದಿದೆ.* ಆಹಾರ ವಸ್ತುಗಳ ಬೆಲೆ ಇಳಿಕೆಯಾಗಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣ. ಜುಲೈನಲ್ಲಿ ಆಹಾರ ಹಣದುಬ್ಬರ ಪ್ರಮಾಣವು ಶೇ –1.76 ದಾಖಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಶೇ 1.18 ಮತ್ತು ನಗರ ಪ್ರದೇಶದಲ್ಲಿ ಶೇ 2.05 ಇತ್ತು.* ಐಸಿಆರ್ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಪ್ರಕಾರ, ಹಣದುಬ್ಬರವು ಮುಂದಿನ ತ್ರೈಮಾಸಿಕಗಳಲ್ಲಿ ಶೇ 4ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿಂದ ಆರ್ಬಿಐ ರೆಪೊ ದರ ಇಳಿಕೆ ಸಾಧ್ಯತೆ ಕಡಿಮೆ.* ಇಂಡಿಯಾ ರೇಟಿಂಗ್ಸ್ನ ಪಾರಸ್ ಜಸರಾಯ್ ಪ್ರಕಾರ, ಆಹಾರ–ಇಂಧನ ಹೊರತುಪಡಿಸಿದ ಹಣದುಬ್ಬರ ಶೇ 4.1 ಇದ್ದು, ಬೇಡಿಕೆ ಸ್ಥಿರವಾಗಿದೆ.* ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಪ್ರಕಾರ, ಹಣದುಬ್ಬರವು ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 4ಕ್ಕಿಂತ ಹೆಚ್ಚು ತಲುಪುವ ಸಾಧ್ಯತೆ ಇದೆ.