* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಜುಲೈ 30 ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆರು ಸಹ-ಪ್ರಯಾಣಿಕ ಉಪಗ್ರಹಗಳೊಂದಿಗೆ ಸಿಂಗಾಪುರದ DS-SAR ಉಪಗ್ರಹ ಹೊತ್ತ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಅನ್ನು ಉಡಾವಣೆ ಮಾಡಲಿದೆ.* DS-SAR ಉಪಗ್ರಹವನ್ನು ಸಿಂಗಾಪುರದ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಮತ್ತು ST ಇಂಜಿನಿಯರಿಂಗ್ ಜೊತೆ ಪಾಲುದಾರಿಕೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.* ವಾಣಿಜ್ಯ ಕಾರ್ಯಾಚರಣೆಯ ಅಂಗವಾಗಿ ಭಾರತ ಸುಮಾರು 360 ಕೆಜಿ ತೂಕದ ಸಿಂಗಾಪುರದ DS-SAR ಉಪಗ್ರಹವನ್ನು ಹೊತ್ತೊಯ್ಯಲಿದೆ. ಜೊತೆಗೆ ಆರು ಸಹ-ಪ್ರಯಾಣಿಕ ಸಣ್ಣಉಪಗ್ರಹಗಳಾದ VELOX-AM,ARCADE, SCOOB-II, NuLIoN, Galassia-2 ಮತ್ತು ORB-12 STRIDER ಗಳನ್ನು ಸಹ ಕಕ್ಷೆಗೆ ತಲುಪಿಸಲಿದೆ.