* ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿಗಳ ದಿನವನ್ನು ಆಚರಿಸಲಾಗುತ್ತದೆ.* ಇತ್ತಿಚಿನ ದಿನಗಳಲ್ಲಿ ಅಳುವಿನಂಚಿನತ್ತ ಹುಲಿಯ ಸಂತತಿಯು ಸಾಗುತ್ತಿದೆ. ಕ್ಷೀಣಿಸುತ್ತಿರುವ ಹುಲಿಗಳ ಸಂಖ್ಯೆಯ ಕುರಿತಾಗಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಂತರಾಷ್ಟ್ರೀಯ ಹುಲಿಗಳ ದಿನವನ್ನು ಆಚರಿಸಲಾಗುತ್ತದೆ.* 2010 ಜುಲೈ 29ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ಹುಲಿ ದಿನವನ್ನು ರಷ್ಯಾದ ಸೆಂಟ್ ಪೀಟರ್ ಬರ್ಗ್ನಲ್ಲಿ ಆಚರಿಸಲಾಯಿತು.* ರಷ್ಯಾದಲ್ಲಿ ಸೇಂಟ್ ಪೀಟರ್ಸ್ಬರ್ಗ್ ಹುಲಿ ಶೃಂಗಸಭೆಯ ಸಂದರ್ಭದಲ್ಲಿ ಇದನ್ನು ರಚಿಸಲಾಯಿತು. ಕ್ಷೀಣಿಸುತ್ತಿರುವ ಹುಲಿ ಸಂಖ್ಯೆಯನ್ನು ಪರಿಹರಿಸಲು ಹದಿಮೂರು ಹುಲಿ-ಶ್ರೇಣಿಯ ದೇಶಗಳು ಒಗ್ಗೂಡಿದವು. 2022 ರ ವೇಳೆಗೆ ಕಾಡು ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಅವರು ಪ್ರತಿಜ್ಞೆ ಮಾಡಿದರು, ಈ ಗುರಿಯನ್ನು “Tx2” ಎಂದು ಕರೆಯಲಾಗುತ್ತದೆ.* WWF, IFAW ಮತ್ತು ಸ್ಮಿತ್ಸೋನಿಯನ್ ಇನ್ಸ್ಟಿಟ್ಯೂಟ್ ನಂತಹ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳು ಅಂತರರಾಷ್ಟ್ರೀಯ ಹುಲಿ ದಿನವನ್ನು ಸಹ ಆಚರಿಸುತ್ತವೆ.* ನಾಲ್ಕು ವರ್ಷಕ್ಕೊಮ್ಮೆ ಹುಲಿ ಗಣತಿ ಮಾಡಲಾಗುತ್ತದೆ. ಪ್ರಪಂಚದ 13 ದೇಶಗಳ ಕಾಡಿನಲ್ಲಿ ಮಾತ್ರ ಹುಲಿಗಳನ್ನು ನಾವು ಕಾಣಬಹುದಾಗಿದೆ. 2018ರ ಗಣತಿ ಪ್ರಕಾರ ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು, ಮಧ್ಯಪ್ರದೇಶ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ, ಕರ್ನಾಟಕದಲ್ಲಿ 524 ಹುಲಿಗಳಿದ್ದು ಕರ್ನಾಟಕ ಎರಡನೇ ಸ್ಥಾನದಲ್ಲಿದೆ. * ಭಾರತದಲ್ಲಿ ಹುಲಿಗಳ ಸಂಖ್ಯೆ 2018ರಲ್ಲಿ 2,967 ಇತ್ತು. 2022ರಲ್ಲಿ ಇವುಗಳ ಸಂಖ್ಯೆ 3,167ಕ್ಕೆ ಏರಿಕೆಯಾಗಿದೆ. ಹುಲಿಗಳನ್ನು ರಕ್ಷಿಸಲು, ಸರಕಾರ 'ಪ್ರಾಜೆಕ್ಟ್ ಟೈಗರ್' ಎಂಬ ಉಪಕ್ರಮವನ್ನು 1973ರಲ್ಲಿ ಪ್ರಾರಂಭಿಸಿತು. ಹುಲಿ ಮೀಸಲುಗಳನ್ನು ಸ್ಥಾಪಿಸಿದೆ. ನೈಸರ್ಗಿಕ ಆವಾಸ ಸ್ಥಾನಗಳಲ್ಲಿ ಹುಲಿಗಳ ಸಂಖ್ಯೆ ಉಳಿಸಲು ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.* ವಿಶ್ವದಲ್ಲಿರುವ ಒಟ್ಟು ಹುಲಿಗಳ ಸಂಖ್ಯೆಯಲ್ಲಿ ಶೇ.75ರಷ್ಟು ಭಾರತದಲ್ಲಿವೆ. ಮಧ್ಯಪ್ರದೇಶದಲ್ಲಿ 785 ಹುಲಿಗಳಿದ್ದು, ಅತಿ ಹೆಚ್ಚು ಹುಲಿಗಳಿರುವ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿದೆ. 563 ಹುಲಿಗಳೊಂದಿಗೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 560 ಹುಲಿಗಳಿರುವ ಉತ್ತರಾಖಂಡ ಮೂರನೇ ಸ್ಥಾನದಲ್ಲಿದೆ, 444 ಹುಲಿಗಳಿರುವ ಮಹಾರಾಷ್ಟ್ರ ನಾಲ್ಕನೇ ಸ್ಥಾನದಲ್ಲಿದೆ.