* 1999 ರಲ್ಲಿ ಮೇ 3 ರಿಂದ ಜುಲೈ 26ರ ವರೆಗೆ ಭಾರತ & ಪಾಕಿಸ್ತಾನದ ನಡುವೆ ನಡೆದ ಕಾರ್ಗಿಲ್ ಯುದ್ಧದ ವಿಜಯದ ನೆನಪಿಗಾಗಿ ಭಾರತದಾದ್ಯಂತ ಪ್ರತಿವರ್ಷ ಜುಲೈ 26 ರಂದು " ಆಪರೇಷನ್ ವಿಜಯ " ದಿನವನ್ನಾಗಿ ಆಚರಿಸಲಾಗುತ್ತದೆ.* ಪಾಕಿಸ್ತಾನದ ವಿರುದ್ಧದ ಕಾರ್ಗಿಲ್ ಯುದ್ಧವನ್ನು ಗೆದ್ದು ಇಂದಿಗೆ 25 ವರ್ಷ ಪೂರ್ಣಗೊಂಡಿದೆ.* ಮೇ 3 ರಂದು ಪ್ರಾರಂಭವಾದ ಕಾರ್ಗಿಲ್ ಯುದ್ಧವು, ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಿಂದ ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಪಾಕಿಸ್ತಾನಿ ಒಳನುಗ್ಗುವವರನ್ನು ಓಡಿಸುವವರೆಗೂ ಮುಂದುವರೆಯಿತು. ಹುತಾತ್ಮರು ಮತ್ತು ಧೈರ್ಯಶಾಲಿ ಸೈನಿಕರ ಅಪಾರ ತ್ಯಾಗಗಳನ್ನು ಈ ದಿನವು ಗೌರವಿಸುತ್ತದೆ.* ಜಮ್ಮು ಕಾಶ್ಮೀರದ ಕಾರ್ಗಿಲ್ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಆಪರೇಷನ್ ವಿಜಯ ಹೆಸರಿನಲ್ಲಿ ಕಾರ್ಯಾಚರಣೆ ನಡಿಸಿ ಯಶಸ್ವಿಯಾಗಿ ಹಿಮ್ಮೆಟ್ಟಿಸಿ ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ.* ಕಾರ್ಗಿಲ್ ಯುದ್ಧವು 1999 ರ ಮೇ-ಜೂನ್ ನಡುವೆ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಹೋರಾಡಲ್ಪಟ್ಟಿತು, ಇದರಲ್ಲಿ ಭಾರತವು ವಿಜಯವನ್ನು ಪಡೆಯಿತು. ಆದ್ದರಿಂದ ಈ ದಿನವನ್ನು ಭಾರತೀಯ ಸೈನಿಕರ ವಿಜಯಕ್ಕಾಗಿ ಸಮರ್ಪಿಸಲಾಗಿದೆ. * ಕಾರ್ಗಿಲ್ ವಿಜಯದ ರಜತ ಮಹೋತ್ಸವದ ಸ್ಮರಣಾರ್ಥವಾಗಿ ಭಾರತೀಯ ವಾಯುಪಡೆಯು ಜುಲೈ 12 ರಿಂದ 26 ರ ವರೆಗೆ ಸರ್ಸಾದ ವಾಯುನೆಲೆಯಲ್ಲಿ ಕಾರ್ಗಿಲ್ ವಿಜಯ ದಿವಸ ರಜತ ಜಯಂತಿಯನ್ನು ಆಚರಿಸಿದೆ.* ಭಾರತದ ಪರವಾಗಿ ಕೆಚ್ಚೆ ದೆಯ ಹೋರಾಟ ಪ್ರದರ್ಶಿಸಿದ ಸಂಜಯ್ ಕುಮಾರ್, ನಯಿಬ್ ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್, ಕ್ಯಾ.ಮನೋಜ್ಕುಮಾರ್ ಪಾಂಡೆ, ಕ್ಯಾ.ವಿಕ್ರಮ್ ಬಾತ್ರಾ ಅವರಿಗೆ ಭಾರತ ಸರಕಾರ ಪರಮವೀರ ಚಕ್ರ ಪುರಸ್ಕಾರ ನೀಡಿತು.* ಕಾರ್ಗಿಲ್ನಿಂದ ಹಿಂದೆ ಸರಿಯುವಂತೆ ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ರಿಂದ ಪಾಕ್ ಪ್ರಧಾನಿ ನವಾಜ್ ಷರೀಫ್ಗೆ ಸೂಚನೆ ನೀಡಿದರು.ನಂತರ ಪಾಕ್ ಸೈನಿಕರ ವಾಪಸಾತಿ ಶುರುವಾಯಿತು. ಜು.14 ರಂದು 'ಆಪರೇಷನ್ ವಿಜಯ' ಕಾರ್ಯಾಚರಣೆ ಯಶಸ್ವಿ ಎಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಘೋಷಿಸಿದರು. ಜು.26ರಂದು ಕಾರ್ಗಿಲ್ ಯುದ್ಧ ಅಧಿಕೃತವಾಗಿ ಕೊನೆಗೊಂಡಿತು.* ಕಾರ್ಗಿಲ್ ಸಮರದ ಹಾದಿ : - ಯುದ್ಧ ನಡೆದ ಅವಧಿ: 74 ದಿನಗಳು- ಯುದ್ಧಕ್ಷೇತ್ರದ ವ್ಯಾಪ್ತಿ: 150 ಕಿ.ಮೀ.- ಒಟ್ಟು ಭಾರತೀಯ ಸೈನಿಕರು: 20,000- ಅತಿಕ್ರಮಣಕಾರರು: 1,500 (ಅಂದಾಜು)- ಹುತಾತ್ಮರಾದ ಭಾರತೀಯ ಸೈನಿಕರು: 527- ಗಾಯಗೊಂಡ ಭಾರತೀಯ ಸೈನಿಕರು: 1,300ಕ್ಕೂ ಹೆಚ್ಚು- ನಾಪತ್ತೆಯಾದ ಭಾರತೀಯ ಸೈನಿಕರು: 06- ಮಡಿದ ಪಾಕ್ ಸೈನಿಕರು: 696- ದೈನಂದಿನ ಸರಾಸರಿ ಯುದ್ಧವೆಚ್ಚ: 15 ಕೋಟಿ ರೂಪಾಯಿಗಳು- ಒಟ್ಟು ವೆಚ್ಚ : 1,100 ಕೋಟಿ ರೂಪಾಯಿಗಳು* ಪ್ರಮುಖ ಘಟನಾವಳಿಗಳು- ಮೇ 3: ಪಾಕಿಸ್ತಾನೀಯರು ಅಕ್ರಮವಾಗಿ ಕಾರ್ಗಿಲ್ ಪ್ರವೇಶಿಸಿದ ಮಾಹಿತಿ- ಮೇ 5 : ಐವರು ಸೈನಿಕರನ್ನು ಸೆರೆಹಿಡಿದು ಹತ್ಯೆಗೈದ ಪಾಕ್- ಮೇ 27 : ಮಿಗ್-21, ಮಿಗ್-27 ಯುದ್ಧವಿಮಾನಗಳ ಮೇಲೆ ಪಾಕ್ ದಾಳಿ- ಜೂ.6 : ಕಾರ್ಗಿಲ್ನಲ್ಲಿ ಪಾಕ್ ಸೈನಿಕರ ವಿರುದ್ಧ ದಾಳಿ ಆರಂಭ.- ಜೂ.9 : ಬಟಾಲಿಕ್ನಲ್ಲಿ ಎರಡು ಪ್ರಮುಖ ಸೇನಾಠಾಣೆ ಮರುವಶ- ಜೂ.13 : ಟೊಲೊಲೊಂಗ್ನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿ- ಜುಲೈ 4 : ಟೈಗರ್ ಹಿಲ್ ಮತ್ತೆ ಭಾರತದ ವಶಕ್ಕೆ- ಜುಲೈ 5 : ದ್ರಾಸ್ ಪ್ರದೇಶ ಭಾರತೀಯ ಸೇನೆ ಹತೋಟಿಗೆ- ಜುಲೈ 11 : ಪಾಕಿಸ್ತಾನವು ಸೇನಾ ವಾಪಸಾತಿ