* ಪ್ರತಿವರ್ಷ ಜುಲೈ 22 ರಂದು ವಿಶ್ವ ಮೆದುಳಿನ ದಿನವನ್ನು ಮೆದುಳಿಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿ ವಿಶ್ವ ಮೆದುಳು ದಿನವನ್ನು ಆಚರಿಸಲಾಗುತ್ತದೆ. * ವಿಶ್ವ ಮೆದುಳಿನ ದಿನದ 2024 ರ ಥೀಮ್  "ಮೆದುಳಿನ ಆರೋಗ್ಯ ಮತ್ತು ತಡೆಗಟ್ಟುವಿಕೆ"  ಎಂಬುದು ಥೀಮ್ ಆಗಿದೆ.* ವಿಶ್ವ ಮೆದುಳು ದಿನವನ್ನು ಮೊದಲ ಬಾರಿಗೆ 2014 ರಲ್ಲಿ 'ವರ್ಲ್ಡ್ ಫೆಡರೇಶನ್ ಆಫ್ ನ್ಯೂರಾಲಜಿ' ಮತ್ತು 'ಇಂಟರ್ನ್ಯಾಷನಲ್ ಹೆಡ್ಏಕ್' ಸೊಸೈಟಿ ಆಚರಿಸಿತು.* ವರ್ಲ್ಡ್ ಫೆಡರೇಶನ್ ಆಫ್ ನ್ಯೂರಾಲಜಿ (WFN) ಅನ್ನು ಜುಲೈ 22, 1957 ರಂದು ಬೆಲ್ಜಿಯಂನಲ್ಲಿ ಸ್ಥಾಪಿಸಲಾಯಿತು.* ಈ ವಿಶ್ವ ಮೆದುಳಿನ ದಿನದ ಪ್ರಸ್ತಾಪವನ್ನು ಸೆಪ್ಟೆಂಬರ್ 22, 2013 ರಂದು ವರ್ಲ್ಡ್ ಕಾಂಗ್ರೆಸ್ ಆಫ್ ನ್ಯೂರಾಲಜಿ (WCN) ಕೌನ್ಸಿಲ್ ಆಫ್ ಡೆಲಿಗೇಟ್ಸ್ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು.* ನರವೈಜ್ಞಾನಿಕ ಅಸ್ವಸ್ಥತೆಗಳ ಪ್ರಾಥಮಿಕ ತಡೆಗಟ್ಟುವಿಕೆ ಸಾಮಾಜಿಕ ಮತ್ತು ಆರ್ಥಿಕ ನಿರ್ಣಾಯಕಗಳನ್ನು ಪರಿಹರಿಸುವ ಮೂಲಕ ಆರೋಗ್ಯವನ್ನು ಹೆಚ್ಚಿಸುವ ಕ್ರಮಗಳನ್ನು ಸೇರಿಸುವ ಮೂಲಕ ಈ ರೋಗಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ.