* ಜೂನ್ 2025ರಲ್ಲಿ ಶೇ. 5.6 ಇದ್ದ ದೇಶದ ನಿರುದ್ಯೋಗ ದರ (UR) ಜುಲೈ 2025ರಲ್ಲಿ ಶೇ. 5.2 ಕ್ಕೆ ಇಳಿದಿದೆ ಎಂದು MoSPI ಬಿಡುಗಡೆ ಮಾಡಿದ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) ತಿಳಿಸಿದೆ.* ಪುರುಷರಲ್ಲಿ ನಿರುದ್ಯೋಗ ಶೇ. 5.3 ಇದ್ದರೆ, ಮಹಿಳೆಯರಲ್ಲಿ ಶೇ. 5.1 ಕಂಡುಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ದರವು ಶೇ. 4.9 ರಿಂದ 4.4 ಕ್ಕೆ ಇಳಿದರೆ, ನಗರಗಳಲ್ಲಿ ಶೇ. 7.1 ರಿಂದ 7.2 ಕ್ಕೆ ಏರಿಕೆ ಕಂಡಿದೆ.* 15-29 ವರ್ಷದ ಯುವಕರ ನಿರುದ್ಯೋಗ ಜೂನ್ನ ಶೇ. 15.3 ರಿಂದ ಜುಲೈನಲ್ಲಿ ಶೇ. 14.9 ಕ್ಕೆ ಇಳಿದಿದೆ. ಆದರೆ ನಗರ ಪ್ರದೇಶಗಳಲ್ಲಿ ಈ ವಯೋಮಾನದ ದರ ಶೇ. 19 ಕ್ಕೆ ಏರಿಕೆಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಶೇ. 13 ಕ್ಕೆ ಇಳಿದಿದೆ.* ಕಾರ್ಮಿಕ ಬಲ ಭಾಗವಹಿಸುವಿಕೆಯ ದರ (LFPR) ಜೂನ್ನ ಶೇ. 41 ರಿಂದ ಜುಲೈನಲ್ಲಿ ಶೇ. 41.4 ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದು ಶೇ. 42 ಆಗಿದ್ದು, ನಗರಗಳಲ್ಲಿ ಶೇ. 40.1 ಕಂಡುಬಂದಿದೆ.* ಕೆಲಸಗಾರರ ಜನಸಂಖ್ಯಾ ಅನುಪಾತ (WPR) ಜೂನ್ನ ಶೇ. 51.2 ರಿಂದ ಜುಲೈನಲ್ಲಿ ಶೇ. 52 ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದು ಶೇ. 54.4 ಆಗಿದ್ದು, ನಗರಗಳಲ್ಲಿ ಶೇ. 47 ಆಗಿದೆ.* ಜನವರಿ 2025ರಿಂದ PLFS ನ ಮಾದರಿ ವಿಧಾನ ಪರಿಷ್ಕೃತಗೊಂಡಿದ್ದು, ಜುಲೈನಲ್ಲಿ 7,519 ಘಟಕಗಳು, 89,505 ಮನೆಗಳು ಹಾಗೂ 3.79 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳನ್ನು ಸಮೀಕ್ಷೆ ಮಾಡಲಾಗಿದೆ.