* ಅಂತರಾಷ್ಟ್ರೀಯ ಅಪರಾಧ ಕೃತ್ಯಗಳ ವಿರುದ್ಧ ಉದಯೋನ್ಮುಖ ಆಧುನಿಕ ನ್ಯಾಯ ವ್ಯವಸ್ಥೆಯನ್ನು ಗುರುತಿಸಲು ಪ್ರತಿ ವರ್ಷ ಜುಲೈ 17 ರಂದು ವಿಶ್ವ ಅಂತರರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನವನ್ನು ಆಚರಿಸಲಾಗುತ್ತದೆ. * ಅಂತರರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನವನ್ನು ಜುಲೈ 17 ರಂದು ಆಚರಿಸಲಾಗುತ್ತದೆ ಏಕೆಂದರೆ ಈ ದಿನವು 1998 ರಲ್ಲಿ ರೋಮ್ ಶಾಸನವನ್ನು ಅಂಗೀಕರಿಸಿದ ವಾರ್ಷಿಕೋತ್ಸವವಾಗಿದೆ. * ಈ ಒಪ್ಪಂದದ ಸಹಾಯದಿಂದ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವನ್ನು (ಐಸಿಸಿ) ಸ್ಥಾಪಿಸಲಾಯಿತು.* ಈ ದಿನವನ್ನು ಅಂತರಾಷ್ಟ್ರೀಯ ಕ್ರಿಮಿನಲ್ ಜಸ್ಟಿಸ್ ದಿನ ಅಥವಾ ಅಂತರಾಷ್ಟ್ರೀಯ ನ್ಯಾಯ ದಿನ ಎಂದೂ ಕರೆಯಲಾಗುತ್ತದೆ. * 1998ರ ಜುಲೈ 17ರಲ್ಲಿ 139 ದೇಶಗಳು ಒಗ್ಗೂಡಿ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ರೋಮ್ ಶಾಸನದ ಶೀರ್ಷಿಕೆಯ ಒಪ್ಪಂದಕ್ಕೆ ಸಹಿ ಹಾಕಿತು. ಆದರೆ 2022ರ ಜುಲೈ 1ರಂದು ಜಾರಿಗೆ ಬಂದು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ಎಂದು ಕರೆಯಲಾಯಿತು. * ನ್ಯಾಯದ ಬಗ್ಗೆ ಹಾಗೂ ಮಾನವೀಯತೆಗೆ ವಿರುದ್ಧವೆನಿಸುವ ಅಪರಾಧ ಕೃತ್ಯಗಳು, ದೌರ್ಜನ್ಯ, ಚಿತ್ರಹಿಂಸೆ, ಯುದ್ಧ ಅಪರಾಧಗಳು, ಮಿಲಿಟರಿ ಆಕ್ರಮಣ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.* ರೋಮ್ ಶಾಸನವನ್ನು ಅಳವಡಿಸಿಕೊಂಡ ದಿನವನ್ನು ನೆನಪಿಸುವ ಉದ್ದೇಶದಿಂದ ಜುಲೈ 17 ರನ್ನು ಅಂತಾರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನ ಎಂದು ಘೋಷಿಸಲಾಯಿತು. * ಮಾನವೀಯತೆಗೆ ವಿರುದ್ದ ವೆನಿಸುವ ಅಪರಾಧ ಕೃತ್ಯಗಳು, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಚಿತ್ರಹಿಂಸೆ, ಯುದ್ಧ ಅಪರಾಧಗಳು ಮತ್ತು ಮಿಲಿಟರಿ ಆಕ್ರಮಣ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಈ ದಿನವು ಹೊಂದಿದೆ.