* ವಿಶ್ವಸಂಸ್ಥೆಯು ಘೋಷಿಸಿದಂತೆ 2014 ರಿಂದ ವಾರ್ಷಿಕವಾಗಿ ಜುಲೈ 15 ರಂದು ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲಾಗುತ್ತದೆ, ಉದ್ಯೋಗ, ಯೋಗ್ಯ ಕೆಲಸ ಮತ್ತು ಉದ್ಯಮಶೀಲತೆಗೆ ಅಗತ್ಯವಾದ ಕೌಶಲ್ಯಗಳನ್ನು ಯುವ ವ್ಯಕ್ತಿಗಳಿಗೆ ನೀಡುವ ಮಹತ್ವವನ್ನು ಗುರುತಿಸುವ ಉದ್ದೇಶವನ್ನು ಹೊಂದಿದೆ. * ವಿಶ್ವ ಕೌಶಲ್ಯ ದಿನದ 2025 ರ ಥೀಮ್ "ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಕೌಶಲ್ಯಗಳ ಮೂಲಕ ಯುವ ಸಬಲೀಕರಣ" ಎಂಬುದು ಈ ವರ್ಷದ ಥೀಮ್ ಆಗಿದೆ.* ಶ್ರೀಲಂಕಾದ ಉಪಕ್ರಮದ ಮೇರೆಗೆ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 2014 ರಂದು ವಿಶ್ವ ಯುವ ಕೌಶಲ್ಯ ದಿನದ ಆಚರಣೆಯನ್ನು ಅಂಗೀಕರಿಸಿತು. ಇದರನ್ವಯ ಮೊದಲ ಬಾರಿಗೆ 2015 ರ ಜುಲೈ 15 ರಂದು ವಿಶ್ವ ಕೌಶಲ್ಯ ದಿನವನ್ನು ಆಚರಿಸಲಾಯಿತು. ವಿಶ್ವಸಂಸ್ಥೆಯು ಸ್ಥಾಪಿಸಿದ ಜಾಗತಿಕ ಉಪಕ್ರಮದ 10 ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.* ತಂತ್ರಜ್ಞಾನದ ನಿರಂತರ ಪ್ರಗತಿ ಮತ್ತು ಕಾರ್ಮಿಕ ಮಾರುಕಟ್ಟೆಯಲ್ಲಿ ಬದಲಾವಣೆಗಳೊಂದಿಗೆ ಹೊಂದಿಕೊಳ್ಳುವ, ಮತ್ತು ಕೌಶಲ್ಯ ಸೆಟ್ಗಳೊಂದಿಗೆ ಯುವಜನರನ್ನು ಸಜ್ಜುಗೊಳಿಸುವುದು ಅತ್ಯಗತ್ಯ.* ವಿಶ್ವದ ಯುವಕರಿಗೆ ಉದ್ಯೋಗ, ಕೆಲಸ ಮತ್ತು ಉದ್ಯಮಶೀಲತೆಗಾಗಿ ಅಗತ್ಯವಾದ ಕೌಶಲ್ಯಗಳನ್ನು ಒದಗಿಸುವುದು ಈ ದಿನದ ಮೂಲ ಉದ್ದೇಶವಾಗಿದೆ.* "ಪ್ರಧಾನಮಂತ್ರಿ ಕೌಶಲ್ ವಿಕಾಸ್" ಯೋಜನೆಯನ್ನು ಭಾರತದಲ್ಲಿ ಜುಲೈ 15, 2015 ರಲ್ಲಿ ವಿಶ್ವ ಕೌಶಲ್ಯ ದಿನದ ಸಂದರ್ಭದಲ್ಲಿ ಪ್ರಾರಂಬಿಸಲಾಯಿತ್ತು.