* ವಿಶ್ವಸಂಸ್ಥೆಯು ಘೋಷಿಸಿದಂತೆ 2014 ರಿಂದ ವಾರ್ಷಿಕವಾಗಿ ಜುಲೈ 15 ರಂದು ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲಾಗುತ್ತದೆ, ಉದ್ಯೋಗ, ಯೋಗ್ಯ ಕೆಲಸ ಮತ್ತು ಉದ್ಯಮಶೀಲತೆಗೆ ಅಗತ್ಯವಾದ ಕೌಶಲ್ಯಗಳನ್ನು ಯುವ ವ್ಯಕ್ತಿಗಳಿಗೆ ನೀಡುವ ಮಹತ್ವವನ್ನು ಗುರುತಿಸುವ ಉದ್ದೇಶವನ್ನು ಹೊಂದಿದೆ. * ವಿಶ್ವ ಕೌಶಲ್ಯ ದಿನದ 2023 ರ ಥೀಮ್ "ಪರಿವರ್ತನೀಯ ಭವಿಷ್ಯಕ್ಕಾಗಿ ಕೌಶಲ್ಯ ಶಿಕ್ಷಕರು, ತರಬೇತುದಾರರು ಮತ್ತು ಯುವಕರು" ಎಂಬುದು ಈ ವರ್ಷದ ಥೀಮ್ ಆಗಿದೆ.* ತಂತ್ರಜ್ಞಾನದ ನಿರಂತರ ಪ್ರಗತಿ ಮತ್ತು ಕಾರ್ಮಿಕ ಮಾರುಕಟ್ಟೆಯಲ್ಲಿ ಬದಲಾವಣೆಗಳೊಂದಿಗೆ ಹೊಂದಿಕೊಳ್ಳುವ, ಮತ್ತು ಕೌಶಲ್ಯ ಸೆಟ್‌ಗಳೊಂದಿಗೆ ಯುವಜನರನ್ನು ಸಜ್ಜುಗೊಳಿಸುವುದು ಅತ್ಯಗತ್ಯ.* "ಪ್ರಧಾನಮಂತ್ರಿ ಕೌಶಲ್ ವಿಕಾಸ್" ಯೋಜನೆಯನ್ನು ಭಾರತದಲ್ಲಿ ಜುಲೈ 15, 2015 ರಲ್ಲಿ ವಿಶ್ವ ಕೌಶಲ್ಯ ದಿನದ ಸಂದರ್ಭದಲ್ಲಿ ಪ್ರಾರಂಬಿಸಲಾಯಿತ್ತು.