* ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ವೈದ್ಯರಾಗಿದ್ದುಕೊಂಡು ಡಾ. ಬಿ. ಸಿ. ರಾಯ್ ಅವರು ಮಾಡಿದ ಜನಸೇವೆಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಜನ್ಮದಿನವಾದ ಜುಲೈ 1 ರಂದು ಪ್ರತಿ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ.* 2025ರ ರಾಷ್ಟ್ರೀಯ ವೈದ್ಯರ ದಿನದ ಥೀಮ್ "ಮುಖವಾಡದ ಹಿಂದೆ: ಗುಣಪಡಿಸುವವರನ್ನು ಯಾರು ಗುಣಪಡಿಸುತ್ತಾರೆ?" ಎಂಬುವುದಾಗಿದೆ.* ವೈದ್ಯರ ಕರ್ತವ್ಯಗಳು, ಪ್ರಾಮುಖ್ಯತೆ ಮತ್ತು ಕೊಡುಗೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸುವ ಉದ್ದೇಶವಾಗಿದೆ.* ಜುಲೈ 1, 1962 ರಂದು ರಾಯ್ ಅವರು ನಿಧನರಾದ ನಂತರ ಸಮಾಜಕ್ಕೆ ಅವರ ಅಪಾರ ಕೊಡುಗೆಗಳನ್ನು ಗುರುತಿಸಿ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಸ್ಮರಣಾರ್ಥ ಈ ದಿನಾಂಕವನ್ನು ಆಯ್ಕೆ ಮಾಡಲಾಯಿತು.* ಭಾರತವು ಜುಲೈ 1 ರಂದು 'ರಾಷ್ಟ್ರೀಯ ವೈದ್ಯರ ದಿನ' ಎಂದು ಆಚರಿಸುತ್ತದೆ ಮತ್ತು ಇದನ್ನು ಭಾರತೀಯ ವೈದ್ಯಕೀಯ ಸಂಘ (IMA) ವಾರ್ಷಿಕವಾಗಿ ಆಯೋಜಿಸುತ್ತದೆ.* ಬ್ರೆಜಿಲ್ನಲ್ಲಿ ಅಕ್ಟೋಬರ್ 18ರಂದು, ಕ್ಯೂಬಾದಲ್ಲಿ ಡಿಸೆಂಬರ್ 3. ರಂದು ಇರಾನ್ನಲ್ಲಿ ಆಗಸ್ಟ್ 23ರಂದು, ವಿಯೆಟ್ನಾಂನಲ್ಲಿ ಫೆಬ್ರವರಿ 28ರಂದು, ನೇಪಾಳದಲ್ಲಿ ಮಾರ್ಚ್ 4ನೇ 1. ವಾರ, ಅಮೆರಿಕನ್ನರು ಮಾರ್ಚ್ 30ರಂದು ರಾಷ್ಟ್ರೀಯ ವೈದ್ಯ " ದಿನವನ್ನಾಗಿ ಆಚರಿಸುತ್ತಾರೆ. * ರೆಡ್ ಕಾರ್ನೇಶನ್ ಹೂವು ವೈದ್ಯ ಈ ದಿನಾಚರಣೆಯ ಸಂಕೇತ. ಕೆಂಪು ಕಾರ್ನೇಶನ್ ಹೂವು ಪ್ರೀತಿ, ತ್ಯಾಗ, ಈ ಧೈರ್ಯ, ಸಾಹಸ ಹಾಗೂ ಸೇವೆಯ ಪ್ರತೀಕವಾಗಿದೆ.