* ಕನ್ನಡದ ಮೊಟ್ಟ ಮೊದಲ ಪತ್ರಿಕೆ ಮಂಗಳೂರು ಸಮಾಚಾರದ ಮೊದಲ ಸಂಚಿಕೆ 1843ರ ಜುಲೈ 1 ರಂದು ಮಂಗಳೂರಿನಿಂದ ಪ್ರಕಟವಾಯಿತು. ಕನ್ನಡ ಪತ್ರಿಕಾ ರಂಗದ ಮೊದಲ ಆವೃತ್ತಿ ಹೊರಬಂದ ದಿನದ ಸ್ಮರಣೆಗೆ ರಾಜ್ಯದಲ್ಲಿ ಜುಲೈ 1 ರಂದು 'ಪತ್ರಿಕಾ ದಿನ'ವಾಗಿ ಆಚರಿಸಲಾಗುತ್ತದೆ. * ಕನ್ನಡದ ಪ್ರಪ್ರಥಮ ಪತ್ರಿಕೆ ಮಂಗಳೂರು ಸಮಾಚಾರ 1843ರ ಜುಲೈ 1ರಂದ ಮಂಗಳೂರಿನಲ್ಲಿ ಬಾಸೆಲ್ ಮಿಷನ್ನವರ ಮುದ್ರಣಾಲಯದಿಂದ ಪ್ರಕಟವಾಯಿತು. ರೆವರೆಂಡ್ ಹರ್ಮನ್ ಮೋಗ್ಲಿಂಗ್ ಅವರು ಸಂಪಾದಕರಾಗಿದ್ದರು. ಜರ್ಮನ್ನ ಮತ ಪ್ರಚಾರಕರಾದ ಮೋಗ್ಲಿಂಗ್ ಅವರನ್ನು ಕನ್ನಡ ಪತ್ರಿಕೋದ್ಯಮದ ಮೂಲಪುರುಷ, ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದು ಅವರನ್ನು ಕರೆಯಲಾಗುತ್ತದೆ.* ಮಂಗಳೂರು ಸಮಾಚಾರ ಪತ್ರಿಕೆ 8 ತಿಂಗಳ ಕಾಲ ಪಾಕ್ಷಿಕವಾಗಿ ಪ್ರಕಟವಾಯಿತು. ವರ್ತಮಾನಗಳು, ಸರಕಾರಿ ನಿರೂಪಗಳು ಕಾನೂನು, ಹಾಡುಗಳು, ಕತೆಗಳು, ಅಂತರಾಜ್ಯ ವರ್ತಮಾನಗಳು, ವಾಚಕರ ವಾಣಿಗಳು ಅಂಕಣಗಳಾಗಿದ್ದವೆಂದು ಮಂಗಳೂರು ದರ್ಶನ ದಾಖಲಿಸಿದೆ. ಬಳಿಕ ಈ ಪತ್ರಿಕೆಯ ಹೆಸರನ್ನು ಕನ್ನಡ ಸಮಾಚಾರ ಎಂದು ಬದಲಿಸಿ ಬಳ್ಳಾರಿಯಿಂದ ಪ್ರಕಟಿಸಲು ಆರಂಭಿಸಿದರು.* ಕನ್ನಡದ ಪತ್ರಿಕ್ಯೋದ್ಯಮದ ವಿಷಯದಲ್ಲಿ ಇಂದು ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ವೃತ್ತಿಪರ ಕೋರ್ಸ್ ರೂಪದಲ್ಲಿ ಪತ್ರಿಕ್ಯೊದ್ಯಮ ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್ಡಿ ಸೇರಿದಂತೆ ಪಿಜಿ ಡಿಪ್ಲೊಮಾ ಕೋರ್ಸ್ ಸಹ ಆರಂಭಿಸಲಾಗಿದ್ದು ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡಿ ಪತ್ರಿಕೋದ್ಯಮದಲ್ಲಿ ಉದ್ಯೋಗವನ್ನು ಕಂಡುಕೊಳ್ಳುತ್ತಿದ್ದು, ಪತ್ರಿಕಾರಂಗ ಪ್ರಜಾಪ್ರಭುತ್ವದ 4ನೇ ಅಂಗವಾಗಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ.