* ಜಪಾನ್ ಜನಸಂಖ್ಯೆ ಜನನದರ ಕುಸಿತದಿಂದ ಹೋರಾಡುತ್ತಿದ್ದರೂ, ದೀರ್ಘಾಯುಷ್ಯದಲ್ಲಿ ವಿಶ್ವದ ಮುಂಚೂಣಿಯಲ್ಲಿದೆ.* ಹಿರಿಯ ವಯಸ್ಕರ ನಾಡೆಂಬ ಖ್ಯಾತಿ ಹೊಂದಿರುವ ಜಪಾನ್ನಲ್ಲಿ 1 ಲಕ್ಷಕ್ಕೂ ಹೆಚ್ಚು ಶತಾಯುಷಿಗಳಿದ್ದಾರೆ.* ಈ ದಾಖಲೆ ಯನ್ನು ಸತತ 55ನೇ ವರ್ಷವೂ ಜಪಾನ್ ತನ್ನದಾಗಿಸಿಕೊಂಡಿದೆ. 1 ಲಕ್ಷಕ್ಕೂ ಹೆಚ್ಚು ಶತಾಯುಷಿ ಗಳ ಪೈಕಿ 87784 ಮಹಿಳೆ ಯರು, 11979 ಪುರುಷರಿ ದ್ದಾರೆ. ಶಿಗೆಕೋ ಕಗಾವಾ* ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಈಗಾಗಲೇ ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಶತಾಯುಷಿಗಳು ಇದ್ದಾರೆ. ಇವರಲ್ಲಿ ಶೇಕಡಾ 88% ಮಹಿಳೆಯರೇ ಆಗಿದ್ದಾರೆ. ನಾರಾದ ಶಿಗೆಕೋ ಕಾಗವಾ 114 ವರ್ಷ ವಯಸ್ಸಿನ ಅತಿ ಹಿರಿಯರಾಗಿದ್ದಾರೆ.* (114) ಹಿರಿಯ ಮಹಿಳೆ, ಕಿಯೋಟಕಾ ಮಿಝುನೋ (111) ಹಿರಿಯ ಪುರುಷ ಎಂಬ ಖ್ಯಾತಿಗಳಿಸಿದ್ದಾರೆ.* ತಜ್ಞರ ಪ್ರಕಾರ, ಜಪಾನೀಸ್ ಜನರ ದೀರ್ಘಾಯುಷ್ಯ ಕೇವಲ ಜನ್ಯ ಕಾರಣದಿಂದ ಅಲ್ಲ. ಪೌಷ್ಠಿಕ ಮೀನು ಹಾಗೂ ತರಕಾರಿಗಳ ಆಧಾರಿತ ಆಹಾರ, ಸರಳ ಶಾರೀರಿಕ ಚಟುವಟಿಕೆಗಳು, ಮತ್ತು "ರೇಡಿಯೋ ತೈಸೋ" ತರಹದ ದಿನನಿತ್ಯದ ವ್ಯಾಯಾಮಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ.* ಹೃದಯ ತಜ್ಞ ಡಾ. ದಿಮಿಟ್ರಿ ಯಾರನೋವ್ ಒಕಿನಾವಾದ ಪಾಠಗಳನ್ನು ಹಂಚಿಕೊಂಡಿದ್ದು, ಬದುಕಿಗೆ ಅರ್ಥ ನೀಡುವ ಉದ್ದೇಶ ಸಸ್ಯಾಧಾರಿತ ಆಹಾರ, ಹೊಟ್ಟೆ 80% ತುಂಬಿದಾಗ ತಿನ್ನುವುದನ್ನು ನಿಲ್ಲಿಸುವುದು, ನಡಿಗೆ/ತೋಟಗಾರಿಕೆ, ಹಾಗೂ ಗಟ್ಟಿಯಾದ ಸಾಮಾಜಿಕ ಸಂಬಂಧಗಳು ದೀರ್ಘಾಯುಷ್ಯಕ್ಕೆ ಮಹತ್ವದ ಅಂಶಗಳು ಎಂದು ಹೇಳಿದ್ದಾರೆ.