* ಅಲ್ವೇನಿಯಾದಲ್ಲಿ ಎಐ ಸಚಿವೆ ನೇಮಕವಾದ ನಂತರ, ಈಗ ಜಪಾನ್ನ ಪಾತ್ ಟು ರೀಬರ್ತ್ ಪಕ್ಷವು ತನ್ನ ಅಧ್ಯಕ್ಷ ಸ್ಥಾನಕ್ಕೆ ಎಐ ಅನ್ನು ಆಯ್ಕೆ ಮಾಡಿದೆ.* ಪಕ್ಷದ ಸ್ಥಾಪಕ ಶಿಂಜಿ ಇಶಿಮಾರು ಚುನಾವಣಾ ಸೋಲಿನ ಬಳಿಕ ರಾಜೀನಾಮೆ ನೀಡಿದರಿಂದ, ಎಐ ಪಕ್ಷದ ಮುಖ್ಯಸ್ಥನಾಗಿ ನೇಮಿಸಲ್ಪಟ್ಟಿದೆ. ನಾಮಮಾತ್ರ ಮುಖ್ಯಸ್ಥನಾಗಿ 25 ವರ್ಷದ ವಿದ್ಯಾರ್ಥಿ ಕೋಕಿ ಒಕುಮುರಾ ಕಾರ್ಯನಿರ್ವಹಿಸುತ್ತಿದ್ದಾರೆ.* ಈ ಎಐ ಪಕ್ಷದ ಸದಸ್ಯರ ನೇರ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸದೇ, ಸಂಪನ್ಮೂಲ ವಿತರಣೆಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಪಕ್ಷದಲ್ಲಿ ಎಐ ಅಭಿವೃದ್ಧಿ ಮತ್ತು ಅನುಷ್ಠಾನ ಇನ್ನೂ ಚರ್ಚೆಯಲ್ಲಿದೆ.* ರಾಜಕೀಯದಲ್ಲಿ ಎಐ ಬಳಕೆ ಹೆಚ್ಚುತ್ತಿದೆ. ಡೆನ್ಮಾರ್ಕ್ನ ಸಿಂಥೆಟಿಕ್ ಪಾರ್ಟಿ ಎಐನ ಮಾರ್ಗದರ್ಶನ ಪಡೆಯುತ್ತಿದ್ದು, ಜಪಾನ್ನ ಟೀಮ್ ಮಿರೈ ಈಗಾಗಲೇ ಸಂಸದೀಯ ಸ್ಥಾನವನ್ನು ಗೆದ್ದಿದೆ. ಬ್ರಿಟನ್ನಲ್ಲೂ ಅಭ್ಯರ್ಥಿ ಅಂದ್ರೂ ಗ್ರೇ ತನ್ನ ಪ್ರಣಾಳಿಕೆ ರಚನೆಗೆ ಎಐ ಬಳಸಿದ್ದರು.