Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
👩💼ಜಪಾನ್ನ ಮೊದಲ ಮಹಿಳಾ ಪ್ರಧಾನಿಯಾಗಿ “ಸನೇ ತಾಕೈಚಿ” ಆಯ್ಕೆ
23 ಅಕ್ಟೋಬರ್ 2025
* ಪ್ರಧಾನಿಯಾಗಿ ಕೇವಲ ಒಂದು ವರ್ಷ ಸೇವೆ ಸಲ್ಲಿಸಿದ ಶಿಗೇರು ಇಶಿಬಾ ಅವರ ನೇತೃತ್ವದಲ್ಲಿ ಲಿಬರಲ್ ಡೆಮಾಕ್ರಟಿಕ ಪಕ್ಷ ನಿರಂತರ ಸೋಲುಗಳನ್ನ ಕಂಡಿತು.ಈ ಕಾರಣದಿಂದ ಬೇಸತ್ತ ಅವರು ಸಂಪುಟಕ್ಕೆ ಬೆಳಿಗ್ಗೆ ರಾಜೀನಾಮೆ ನೀಡಿ,ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆಗೆ ದಾರಿ ಮಾಡಿಕೊಟ್ಟರು.
* ಇತರ ಪಾಲುದಾರರ ಜೊತೆ ಲಿಬರಲ್ ಡೆಮಾಕ್ರಟಿಕ ಪಕ್ಷವು ಮೈತ್ರಿ ಒಪ್ಪಂದವನ್ನು ಮಾಡಿಕೊಂಡ ಬಳಿಕ ಸನೇ ತಾಕೈಚಿ ಅವರು ಜಪಾನ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ,ಅವರನ್ನು ಸಂಸತ್ತು ಮಂಗಳವಾರ ಆಯ್ಕೆ ಮಾಡಿತು.
* ವಿರೋಧ ಪಕ್ಷದಲ್ಲಿ ಒಗ್ಗಟ್ಟು ಇಲ್ಲದೆ ಇದ್ದದ್ದು ತಕೈಚಿ ಆಯ್ಕೆಗೆ ವರದಾನವಾಯಿತು.ಎಲ್ ಡಿ ಪಿ ಯು ಒಸಾಕಾ ಮೂಲದ ಬಲಪಂಥೀಯ "ಜಪಾನ ಇನೊವೇಶನ ಪಾರ್ಟಿ "ಜತೆ ಮೈತ್ರಿ ಮಾಡಿಕೊಂಡು,ಪ್ರಧಾನಿ ಆಯ್ಕೆಯನ್ನು ಖಚಿತಪಡಿಸಿಕೊಂಡರು.
* ಜಪಾನ ಇತಿಹಾಸದಲ್ಲಿ ಮಹಿಳೆಯೊಬ್ಬರು ಪ್ರಧಾನಿ ಹುದ್ದೆ ಅಲಂಕರಿಸಿದ್ದು ಅಲ್ಲಿನ ಜನತೆಗೆ ಹೆಮ್ಮೆಯ ವಿಷಯವಾಗಿದೆ.
* ಅಕ್ಟೋಬರ್ 4 ರಂದು ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ 64 ವರ್ಷದ ಸನೇ ತಾಕೈಚಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು.ಐದನೇ ಪ್ರಧಾನಿಯಾಗಿ ತಾಕೈಚಿ ಅವರ ಆಯ್ಕೆ ಕುರಿತು ಕೆಳಮನೆಯಲ್ಲಿ ಮತ ಚಲಾಯಿಸಲಾಗಿದ್ದು,ಬಹುಮತದಿಂದ ಆಯ್ಕೆಯಾಗಿದ್ದಾರೆ.
*" ಜಪಾನ ಆರ್ಥಿಕತೆಯನ್ನು ಬಲಪಡಿಸಲು ಮತ್ತು ಭವಿಷ್ಯದ ಪೀಳಿಗೆಗೆ ಜವಾಬ್ದರರಾಗಿರುವ ದೇಶವನ್ನಾಗಿ ಮರು ರೂಪಿಸುವ ಪ್ರಯತ್ನಗಳಲ್ಲಿ ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ " ಎಂದು ತಾಕೈಚಿ ಅವರು ಒಪ್ಪಂದಕ್ಕೆ ಸಹಿ ಹಾಕುವಾಗ ಜೆ ಐ ಪಿ ಯು ಸಹ ಮುಖ್ಯಸ್ಥ ಹಿರೋಪುಮಿ ಯೊಶಿಮುರಾ ಅವರು ತಿಳಿಸಿದ್ದಾರೆ.
*ಅವರ ರಾಜಕೀಯ ಪ್ರಯಾಣವು 1993 ರಲ್ಲಿ ಪ್ರಾರಂಭವಾಯಿತು.ಸಂಪ್ರದಾಯವಾದಿಗಳ ಪಾಲಿಗೆ ಉಕ್ಕಿನ ಮಹಿಳೆ ಎಂದು ಖ್ಯಾತಿ ಹೊಂದಿದ್ದಾರೆ.ಇವರು ಆಂತರಿಕ ವ್ಯವಹಾರಗಳು,ಲಿಂಗ ಅಸಮಾನತೆ ಮತ್ತು ಆರ್ಥಿಕ ಭದ್ರತೆಯ ಸಚಿವೆ ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.
* ದೇಶದ ಜನಪ್ರಿಯ ಮಾಜಿ ಪ್ರಧಾನಿ ಜುನಿಚಿರೊ ಕೊಯುಚ್ಮಿಅವರ ಪುತ್ರ ಹಾಗು ಕೃಷಿ ಸಚಿವ 44 ವರ್ಷದ ಶಿಂಜಿರೋ ಕೊಯುಚ್ಮಿ ಅವರನ್ನು ಸನೇ ಮನ್ನಿಸಿದ್ದರು.
Take Quiz
Loading...