* ಜಪಾನ್ ಪ್ರಧಾನಿ ಶಿಗೇರು ಇಶಿಬಾ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. ಅಧಿಕಾರಕ್ಕೇರಿದ ಒಂದು ವರ್ಷವೂ ಆಗುವ ಮುನ್ನ ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತ ಕಳೆದುಕೊಂಡ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ.* ಜಪಾನ್ನ ಆರ್ಥಿಕತೆ ಈಗ ಸಂಕಷ್ಟದಲ್ಲಿದೆ. ಆಹಾರ ವಸ್ತುಗಳ ಬೆಲೆ ಏರಿಕೆ, ಅಮೆರಿಕ ಹೇರಿದ ಕಾರು ಸುಂಕ ಮುಂತಾದವು ಆರ್ಥಿಕತೆಗೆ ಹೊಡೆತ ನೀಡಿವೆ. ಈ ಪರಿಸ್ಥಿತಿಯಲ್ಲಿ ಇಶಿಬಾ ರಾಜೀನಾಮೆ ಘೋಷಿಸಿದ್ದಾರೆ.* ತಮ್ಮ ನಿರ್ಧಾರವನ್ನು ವಿವರಿಸುತ್ತಾ, "ಸೂಕ್ತ ಸಮಯ ಬಂದಿದೆ, ನಾನು ಪಕ್ಕಕ್ಕೆ ಸರಿದು ಮುಂದಿನ ತಲೆಮಾರಿಗೆ ದಾರಿ ಮಾಡಿಕೊಡುತ್ತೇನೆ" ಎಂದು ಇಶಿಬಾ ಹೇಳಿದ್ದಾರೆ.* ಇಶಿಬಾ ಸೇರಿದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯಲ್ಲೇ ನಾಯಕತ್ವ ಬದಲಾವಣೆಯ ಒತ್ತಡ ಹೆಚ್ಚಿತ್ತು. ಪಕ್ಷ ವಿಭಜನೆ ತಪ್ಪಿಸಲು ಮತ ಚಲಾವಣೆಗೂ ಮುನ್ನವೇ ಅವರು ರಾಜೀನಾಮೆ ಘೋಷಿಸಿದ್ದಾರೆ.