* ಭಾರತದ ಮೊದಲ ಹೈಸ್ಪೀಡ್ ಬುಲೆಟ್ ರೈಲು ಸೇವೆಯತ್ತ ಪ್ರಮುಖ ಹೆಜ್ಜೆ ಇಡಲಾಗಿದೆ. ನ್ಯಾಷನಲ್ ಹೈ ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ಮುಂಬೈ-ಅಹಮದಾಬಾದ್ ನಡುವೆ 508 ಕಿಮೀ ಉದ್ದದ ರೈಲು ಮಾರ್ಗವನ್ನು ನಿರ್ಮಿಸುತ್ತಿದೆ.* ಇದರಲ್ಲಿನ 352 ಕಿಮೀ ಗುಜರಾತ್ನ ಒಂಬತ್ತು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ; ಉಳಿದ ಭಾಗ ಮಹಾರಾಷ್ಟ್ರದ ಮೂರು ಜಿಲ್ಲೆಗಳ ಮೂಲಕ ಸಾಗುತ್ತದೆ.* ಈ ಯೋಜನೆಯಡಿ ಜಪಾನ್ನಲ್ಲಿ ಬುಲೆಟ್ ರೈಲುಗಳ ಪರೀಕ್ಷಾರ್ಥ ಸಂಚಾರ ಆರಂಭವಾಗಿದೆ. ಭಾರತಕ್ಕೆ ಶಿಂಕಾನ್ಸೆನ್ E5 ಮತ್ತು E3 ಸರಣಿಯ ಎರಡು ರೈಲು ಸೆಟ್ಗಳನ್ನು ಜಪಾನ್ ಉಡುಗೊರೆಯಾಗಿ ನೀಡಲಿದೆ.* ಈ ರೈಲುಗಳು 2026ರ ಆರಂಭದಲ್ಲಿ ಭಾರತಕ್ಕೆ ತಲುಪಲಿವೆ ಹಾಗೂ 320 ಕಿಮೀ ವೇಗದಲ್ಲಿ ಚಲಿಸುತ್ತವೆ.* ಭಾರತದ ಹವಾಮಾನ ಮತ್ತು ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಈ ರೈಲುಗಳ ಪರಿಶೀಲನೆ ನಡೆಯಲಿದೆ. ಇವುಗಳಲ್ಲಿ ಹಳಿಗಳ ಸ್ಥಿತಿ, ತಾಪಮಾನ, ಧೂಳಿನ ಮಟ್ಟ ಹೀಗೆ ವಿವಿಧ ಅಂಶಗಳನ್ನು ಪರಿಶೀಲಿಸುವ ತಂತ್ರಜ್ಞಾನವಿದೆ.* ಈ ಮಾಹಿತಿ 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ಮುಂದಿನ ಪೀಳಿಗೆಯ ಬುಲೆಟ್ ರೈಲು ಅಭಿವೃದ್ಧಿಗೆ ಉಪಯುಕ್ತವಾಗಲಿದೆ.* ಮುಂಬೈ-ಅಹಮದಾಬಾದ್ ಕಾರಿಡಾರ್ನಲ್ಲಿ 12 ನಿಲ್ದಾಣಗಳಿರಲಿದ್ದು, ಥಾಣೆ, ಸೂರತ್, ವಡೋದರಾ ಪ್ರಮುಖವು. ಈ ಕಾರಿಡಾರ್ ಪ್ರಯಾಣದ ಸಮಯವನ್ನು 7 ಗಂಟೆಯಿಂದ 2 ಗಂಟೆ 7 ನಿಮಿಷಗಳಿಗೆ ಇಳಿಸುತ್ತೆ.* 2016 ರಲ್ಲಿ ಭಾರತ-ಜಪಾನ್ ನಡುವೆ ಸಹಿ ಮಾಡಿದ ಒಪ್ಪಂದದಂತೆ, ಈ ಯೋಜನೆಯ ವೆಚ್ಚದ 80% ಯೆನ್ ಸಾಲದ ಮೂಲಕ ಜಪಾನ್ ನೀಡುತ್ತಿದೆ.