* ಜೋಯಿಡಾ ತಾಲೂಕಿನ ಭೂಮಿಯಲ್ಲಿ ರಾಸಾಯನಿಕಗಳ ಬಳಕೆ ನಿಷೇಧಿಸಿ, ಸಾವಯವ ಕೃಷಿಯನ್ನು ಪ್ರೋತ್ಸಾಹಿಸಿ, ದೇಶದ ಮೊದಲ ಸಂಪೂರ್ಣ ಸಾವಯವ ಕೃಷಿ ತಾಲೂಕನ್ನಾಗಿ ಪರಿವರ್ತನೆ ಮಾಡುವ ಯೋಜನೆ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.* ಜೋಯಿಡಾ ತಾಲೂಕು ಶೇ.70ರಷ್ಟು ಅರಣ್ಯದಿಂದ ಕೂಡಿದ್ದು, ನೈಸರ್ಗಿಕ ಸಂಪತ್ತು, ಶುದ್ಧ ವಾತಾವರಣ ಇರುವ ಈ ಪ್ರದೇಶ ಸಾವಯವ ಕೃಷಿಗೆ ಉತ್ತಮವಾಗಿದೆ. ರೈತರ ಸಹಕಾರದಿಂದ ಮಾತ್ರ ಈ ಮಾರ್ಪಾಡು ಸಾಧ್ಯ ಎಂದು ಸಚಿವರು ಹೇಳಿದರು.* ಹಿಂದೆ ರೈತರು ಸಾವಯವ ಗೊಬ್ಬರ ಬಳಸಿ ಕೃಷಿ ಮಾಡುತ್ತಿದ್ದರು. ರಾಸಾಯನಿಕ ಬಳಕೆಯಿಂದ ಮಣ್ಣು, ಬೆಳೆಗೆ ಮತ್ತು ಆರೋಗ್ಯಕ್ಕೆ ಹಾನಿಯಾಗಿದೆ. ರೈತರು ಪುನಃ ಸಾವಯವ, ನೈಸರ್ಗಿಕ ಮತ್ತು ಸಿರಿಧಾನ್ಯ ಕೃಷಿಗೆ ಮರಳಬೇಕು ಎಂದು ಸಲಹೆ ನೀಡಿದರು.* 224 ಕ್ಷೇತ್ರಗಳಲ್ಲಿ ಕೃಷಿ ಹೊಂಡ ನಿರ್ಮಾಣ ಯೋಜನೆಯು ನಡೆಯುತ್ತಿದೆ. 24000 ಹೊಂಡಗಳ ನಿರ್ಮಾಣ ಈಗಾಗಲೇ ಪೂರ್ಣವಾಗಿದೆ. ಕಬ್ಬು ರೈತರಿಗೆ ಯಂತ್ರೋಪಕರಣ ಖರೀದಿಗೆ ₹50 ಲಕ್ಷವರೆಗೆ ಸಬ್ಸಿಡಿ ನೀಡಲಾಗುತ್ತಿದೆ.* ಮುಂದಿನ 3 ವರ್ಷಗಳಲ್ಲಿ ಸಂಪೂರ್ಣ ಸಾವಯವ ಕೃಷಿ ತಾಲೂಕನ್ನಾಗಿ ಜೋಯಿಡಾವನ್ನು ರೂಪಿಸಲಾಗುತ್ತದೆ.* ಪ್ರಸ್ತುತ ರೈತರ ಶೇ.80 ರಷ್ಟು ಜನರು ಹಸುವಿನ ಗೊಬ್ಬರ ಬಳಸುತ್ತಿದ್ದಾರೆ. 4059 ಎಕರೆ ಭತ್ತ, 121 ಎಕರೆ ಅಡಿಕೆ, 286 ಎಕರೆ ಬಾಳೆ ಮತ್ತು 81 ಎಕರೆ ಕಬ್ಬು ಬೆಳೆಯಲಾಗುತ್ತಿದೆ.* ಇಲ್ಲಿ ಕುಣಬಿ ಜನಾಂಗದವರು ಸಾವಯವ ಪದ್ದತಿಯಲ್ಲಿ 43 ತಳಿಗಳ ಗೆಣಸು ಬೆಳೆಯುತ್ತಿದ್ದಾರೆ. ಕೇಂದ್ರದಿಂದ ಪ್ರಮಾಣೀಕರಣ ಕೂಡ ಸಿಕ್ಕಿದೆ. ವರ್ಷಕ್ಕೆ ಶೇ.50 ಟನ್ಗೂ ಹೆಚ್ಚು ಶುದ್ಧ ಜೇನುತುಪ್ಪ ಉತ್ಪತ್ತಿ ಜೋಯಿಡಾದಲ್ಲಿದೆ.