* ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ನಿತ್ಯ ಪೂಜೆ ಸಲ್ಲಿಸಲು ಹಿಂದೂಗಳಿಗೆ ವಾರಣಾಸಿಯ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ. ಈ ನಿರ್ಧಾರದಿಂದಾಗಿ ಈಗ ಪ್ರತಿಯೊಬ್ಬ ಹಿಂದುವೂ ಈ ನೆಲಮಹಡಿಗೆ ಹೋಗಿ ದರ್ಶನ ಮತ್ತು ಪೂಜೆಯನ್ನು ಮಾಡಬಹುದಾಗಿದೆ. * ಮಸೀದಿಯ ನೆಲಮಹಡಿಯಲ್ಲಿ ನಿತ್ಯ ಪೂಜೆ ಸಲ್ಲಿಸಲು ಅರ್ಚಕರಿಗೆ ಕೋರ್ಟ್ ಅವಕಾಶ ನೀಡಿದ್ದು, ಪೂಜೆಗೆ ಅಗತ್ಯ ವ್ಯವಸ್ಥೆಯನ್ನು ನೀಡಬೇಕೆಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಆದೇಶಿಸಿದೆ.  * 1993ರ ಮೊದಲು ಇಲ್ಲಿ ನಿತ್ಯ ಪೂಜೆ ನಡೆಯುತ್ತಿತ್ತು; ಆದರೆ ಆಗಿನ ಸರಕಾರ ಇದನ್ನು ನಿಷೇಧಿಸಿತ್ತು. ಈಗ ಪೂಜೆಗೆ ಅನುಮತಿ ನೀಡಬೇಕೆಂದು ಹಿಂದೂ ಪಕ್ಷ ಆಗ್ರಹಿಸಿತ್ತು. ಮುಂದಿನ 7 ದಿನಗಳಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ವ್ಯವಸ್ಥೆ ಮಾಡುವಂತೆ ವಾರಣಾಸಿಯ ಜಿಲ್ಲಾಧಿಕಾರಿಗೆ ನ್ಯಾಯಾಲಯ ಆದೇಶಿಸಿದೆ. * ನ್ಯಾಯಾಲಯದ ಆದೇಶದ ನಂತರ ಪ್ರಸ್ತುತ ಕಾಶಿ ವಿಶ್ವನಾಥ ದೇವಸ್ಥಾನದ ಆವರಣದಲ್ಲಿ ನಂದಿಯ ಮುಂಭಾಗದಿಂದ ಜ್ಞಾನವಾಪಿ ವ್ಯಾಸ ನೆಲಮಾಳಿಗೆಗೆ ಹೋಗುವ ರಸ್ತೆಯನ್ನು ನಿರ್ಮಿಸಲಾಗುವುದು. ಸದ್ಯ ಇಲ್ಲಿ ಕಬ್ಬಿಣದ ಬೇಲಿ ಅಳವಡಿಸಲಾಗಿದೆ.* ‘ಕಾಶಿ ವಿಶ್ವನಾಥ ಟ್ರಸ್ಟ್’ ಅಡಿಯಲ್ಲಿ ನೆಲಮಾಳಿಗೆಯಲ್ಲಿ ಪೂಜೆ ನಡೆಯಲಿದೆ. *  ಈ ಸಂಬಂಧ ಆಚಾರ್ಯ ವೇದವ್ಯಾಸ ಪೀಠದ ಪ್ರಧಾನ ಅರ್ಚಕ ಶೈಲೇಂದ್ರ ಕುಮಾರ್ ಪಾಠಕ್ ಪ್ರಕರಣ ದಾಖಲಿಸಿದ್ದರು. ನಂತರ ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿಯ ದಕ್ಷಿಣ ನೆಲಮಾಳಿಗೆಯ ನಿಯಂತ್ರಣವನ್ನು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಹಸ್ತಾಂತರಿಸಿತ್ತು.