* ಈ ವರ್ಷ ಭಾರತವು ತನ್ನ 76ನೇ ಗಣರಾಜ್ಯೋತ್ಸವವನ್ನು ಜನವರಿ 26ರಂದು ಆಚರಿಸುತ್ತಿದೆ. ಭಾರತದ ಸಂವಿಧಾನ ಅಂಗೀಕಾರಗೊಂಡ ದಿನ ಮತ್ತು 1950ರ ಜನವರಿ 26ರಂದು ರಾಷ್ಟ್ರವನ್ನು ಗಣರಾಜ್ಯವಾಗಿ ಒಪ್ಪಿಕೊಂಡ ದಿನವಾಗಿ ಇದನ್ನು ಆಚರಿಸಲಾಗುತ್ತದೆ.* ಈ ಬಾರಿ ಭಾರತದಲ್ಲಿ ನಡೆಯುತ್ತಿರುವ 76ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ಮಾಡಿದರು. ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೋ ಸುಬಿಯಂಟೋ ಅವರು ಗಣರಾಜ್ಯೋತ್ಸವ ಪರೇಡ್ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.* ಈ ವರ್ಷ ‘ಸುವರ್ಣ ಭಾರತ: ಪರಂಪರೆ ಮತ್ತು ಪ್ರಗತಿ‘ ಎಂಬ ಥೀಮ್ ನಲ್ಲಿ 76 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.* ಆಕರ್ಷಕ ಪರೇಡ್, ಗಮನ ಸೆಳೆವ ವಿವಿಧ ರಾಜ್ಯಗಳ ಟ್ಲಾಬ್ಲೋಗಳು ಗಣರಾಜ್ಯೋತ್ಸವದ ಮುಖ್ಯ ಆಕರ್ಷಣೆಯಾಗಿರುತ್ತದೆ.- ಸ್ತಬ್ಧಚಿತ್ರಗಳ ಪ್ರದರ್ಶನ ಮತ್ತು ಸಾರ* ಕರ್ನಾಟಕ: ಲಕ್ಕುಂಡಿ ದೇಗುಲ* ಹರಿಯಾಣ: ಭಗವದ್ಗೀತೆ.* ಜಾರ್ಖಂಡ್: ತನ್ನ ಪರಂಪರೆ ಮತ್ತು ಪ್ರಗತಿ* ಗುಜರಾತ್: ಸ್ವರ್ಣಿಮ ಭಾರತದ ಮೇಲೆ ಕೇಂದ್ರೀಕೃತ* ಆಂಧ್ರಪ್ರದೇಶ ಮತ್ತು ಪಂಜಾಬ್: ಪರಿಸರ ಸ್ನೇಹಿ ಆಟಿಕೆಗಳು* ಉತ್ತರಪ್ರದೇಶ: ಮಹಾಕುಂಭ* ಬಿಹಾರ: ನಳಂದ ವಿಶ್ವವಿದ್ಯಾಲಯ* ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನದ ಪ್ರದರ್ಶನ* ತ್ರಿಪುರ: ಖಾರ್ಚಿ ಪೂಜೆ* ಪಶ್ಚಿಮ ಬಂಗಾಳ: ಸ್ವಾವಲಂಬನೆ ಉಪಕ್ರಮಗಳು* ಚಂಡೀಗಢ: ಪರಂಪರೆ ಮತ್ತು ನಾವೀನ್ಯತೆಯ ಮಿಶ್ರಣ* ದಿಲ್ಲಿ: ಗುಣಮಟ್ಟದ ಶಿಕ್ಷಣ* ದಾದ್ರಾ ನಗರ ಹವೇಲಿ, ದಿಯು ಮತ್ತು ದಮನ್: ಭಾರತೀಯ ನೌಕಾಪಡೆಗೆ ಗೌರವ- ಪ್ರಮುಖ ಅಂಶಗಳು* ಈ ಬಾರಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಗಳ 31 ಸ್ತಬ್ಧಚಿತ್ರಗಳ ಪ್ರದರ್ಶನ ನಡೆದಿದೆ. ಅದರಲ್ಲಿ ರಾಜ್ಯದ ಲಕ್ಕುಂಡಿ ದೇಗುಲದ ಸ್ತಬ್ಧಚಿತ್ರವು ಎಲ್ಲರ ಗಮನಸೆಳೆದಿದೆ.* ಸೇನಾ ಪರೇಡ್ ನಲ್ಲಿ ಇಬ್ಬರು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರು, ಕಾರ್ಗಿಲ್ ಯುದ್ಧ ವೀರರು ಹಾಗೂ ಒಬ್ಬ ಅಶೋಕ ಚಕ್ರ ಪುರಸ್ಕೃತರು ಭಾಗಿಯಾಗಿದ್ದರು.* ಸಿ -275, ಸಿ-17, ಗ್ರೋಬ್ ಮಾಸ್ಟರ್ ಪಿ -8ಐ ಮಿಗ್-29 ಮತ್ತು ಸುಖೋಯ್-30, ಇತರ ವಿಮಾನಗಳು ಸೇರಿ ಹಲವಾರು ಲೋಹದ ಹಕ್ಕಿಗಳು ಬಾಹ್ಯಾಕಾಶದಲ್ಲಿ ಹಾರಾಟ ನಡೆಸಿವೆ.- ರಾಜ್ಯದಲ್ಲಿ ಗಣರಾಜ್ಯೋತ್ಸವಬೆಂಗಳೂರಿನ ಮಾರ್ಷಲ್ ಮಾಣಿಕ್ ಷಾ ಮೈದಾನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಈ ವೇಳೆ ಭಾರತೀಯ ರಕ್ಷಣಾ ಪಡೆಯ ಮೂವರು ಹಿರಿಯ ಅಧಿಕಾರಿಗಳನ್ನು ರಾಜ್ಯಪಾಲರಿಗೆ ಪರಿಚಯಿಸಲಾಯಿತು. ಪೊಲೀಸ್, ಗೃಹರಕ್ಷಕ ದಳ, ಎನ್ಸಿಸಿ ಸಹಿತ ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.* ಗಣರಾಜ್ಯೋತ್ಸವದ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ. 'ಸಂವಿಧಾನ ಜಾರಿಗೊಳಿಸಿ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಘೋಷಣೆ ಮಾಡಿಕೊಂಡ 75 ವರ್ಷಗಳ ನಂತರವೂ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಟ ನಡೆಸಬೇಕಾದ ವಿಷಾದನೀಯ ಸ್ಥಿತಿಯಲ್ಲಿ ಗಣರಾಜ್ಯೋತ್ಸವವನ್ನು ನಾವು ಆಚರಿಸುತ್ತಿದ್ದೇವೆ.- ವೀರಗಾಥಾ ವಿಜೇತರಿಗೆ ಪ್ರಶಸ್ತಿ: * ಗಣರಾಜ್ಯೋತ್ಸವದ ಅಂಗವಾಗಿ ರಕ್ಷಣಾ ಹಾಗೂ ಶಿಕ್ಷಣ ಸಚಿವಾಲಯದ ಸಹಯೋಗದಲ್ಲಿ ದೇಶಾದ್ಯಂತ ಆಯೋಜಿಸಿದ್ದ ವೀರಗಾಥಾ 4.0 ಸ್ಪರ್ಧೆಯ ಕರ್ನಾಟಕದ 8 ಸೇರಿದಂತೆ ಒಟ್ಟು 100 ವಿಜೇತರಿಗೆ ನವದೆಹಲಿಯಲ್ಲಿ ಪ್ರಶಸ್ತಿ ನೀಡಲಾಗಿದೆ. ಆಯ್ಕೆಯಾಗಿರುವ 100 ವಿದ್ಯಾರ್ಥಿಗಳಲ್ಲಿ 66 ಮಂದಿ ಹೆಣ್ಣುಮಕ್ಕಳಿರುವುದು ವಿಶೇಷ, ವೀರಗಾಥಾ ಸ್ಪರ್ಧೆಯಲ್ಲಿ ದೇಶಾದ್ಯಂತ 2.5 ಲಕ್ಷ ಶಾಲೆಗಳಿಂಂದ 1.75 ಕೋಟಿ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದರು.