* ಈ ವರ್ಷ ಭಾರತವು ತನ್ನ 75ನೇ ಗಣರಾಜ್ಯೋತ್ಸವವನ್ನು ಜನವರಿ 26ರಂದು ಆಚರಿಸುತ್ತಿದೆ. ಭಾರತದ ಸಂವಿಧಾನ ಅಂಗೀಕಾರಗೊಂಡ ದಿನ ಮತ್ತು 1950ರ ಜನವರಿ 26ರಂದು ರಾಷ್ಟ್ರವನ್ನು ಗಣರಾಜ್ಯವಾಗಿ ಒಪ್ಪಿಕೊಂಡ ದಿನವಾಗಿ ಇದನ್ನು ಆಚರಿಸಲಾಗುತ್ತದೆ.* ಈ ಬಾರಿ ಭಾರತದಲ್ಲಿ ನಡೆಯುತ್ತಿರುವ 75ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ಮಾಡಿದರು. ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.* ಈ ವರ್ಷ 'ವಿಕ್ಷಿತ್ ಭಾರತ್' ಮತ್ತು 'ಭಾರತ್ - ಲೋಕತಂತ್ರ ಕಿ ಮಾತೃಕಾ' ಎಂಬ ಥೀಮ್‌ನಲ್ಲಿ ಗಣರಾಜ್ಯೋತ್ಸವ ಪರೇಡ್‌ ನಡೆಯುತ್ತದೆ. * ಆಕರ್ಷಕ ಪರೇಡ್‌, ಗಮನ ಸೆಳೆವ ವಿವಿಧ ರಾಜ್ಯಗಳ ಟ್ಲಾಬ್ಲೋಗಳು ಗಣರಾಜ್ಯೋತ್ಸವದ ಮುಖ್ಯ ಆಕರ್ಷಣೆಯಾಗಿರುತ್ತದೆ.