* ಭಾರತದ ರಮಣೀಯ ಭೂದೃಶ್ಯಗಳನ್ನು ಗೌರವಿಸಲು ಮತ್ತು ದೇಶದ ಆರ್ಥಿಕತೆಗೆ ಪ್ರವಾಸೋದ್ಯಮದ ಮೌಲ್ಯದ ಬಗ್ಗೆ ಸಾರ್ವಜನಿಕ ತಿಳುವಳಿಕೆಯನ್ನು ಹೆಚ್ಚಿಸಲು ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ.  ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಮೊದಲ ಬಾರಿಗೆ 1948 ರಲ್ಲಿ ಆಚರಿಸಲಾಯಿತು.* 2024 ರ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಥೀಮ್ 'ಸಸ್ಟೈನಬಲ್ ಜರ್ನೀಸ್, ಟೈಮ್‌ಲೆಸ್ ಮೆಮೊರೀಸ್,' ಜವಾಬ್ದಾರಿಯುತ ಮತ್ತು ಜಾಗರೂಕ ಪ್ರಯಾಣವನ್ನು ಉತ್ತೇಜಿಸುತ್ತದೆ. * ಭಾರತೀಯ ಪ್ರವಾಸೋದ್ಯಮವು ವಿಹಾರ, ವ್ಯಾಪಾರ, ಕ್ರೀಡೆ, ಗ್ರಾಮೀಣ, ಶೈಕ್ಷಣಿಕ ಮತ್ತು ವೈದ್ಯಕೀಯ ಪ್ರಯಾಣದಂತಹ ವ್ಯಾಪಕ ಶ್ರೇಣಿಯ ಪ್ರಯಾಣದ ಅನುಭವಗಳನ್ನು ನೀಡುತ್ತದೆ.* ಭಾರತದ ವೈವಿಧ್ಯತೆಯು ಇದನ್ನು ಜನಪ್ರಿಯ ಪ್ರವಾಸಿ ತಾಣವನ್ನಾಗಿ ಮಾಡುತ್ತದೆ. ಪ್ರವಾಸ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಅನೇಕರನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ* ನಮ್ಮ ದೇಶದ ಪ್ರವಾಸೋದ್ಯಮವನ್ನು ಕಣ್ತುಂಬಿಕೊಳ್ಳಲು ಅನೇಕ ದೂರದ ದೇಶಗಳಿಂದ ಸಂದರ್ಶಕರು ಭೇಟಿ ನೀಡುತ್ತಾರೆ. ಇಲ್ಲಿನ ರಮಣೀಯ ಭೂದೃಶ್ಯ, ಆಹ್ಲಾದಕರವಾದ ಗಿರಿಧಾಮಗಳು, ಎತ್ತರವಾದ ಬೆಟ್ಟಗಳು, ಪ್ರಶಾಂತವಾಗಿ ಹರಿಯುವ ನದಿ, ಸರೋವರ, ಜಲಪಾತಗಳು, ಘರ್ಜಿಸುವ ಸಮುದ್ರತೀರದ ಅಲೆಗಳು ಎಂತವರನ್ನು ಮರಳುಗಳಿಸುತ್ತದೆ.