Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಜನವರಿ 23 : ಪರಾಕ್ರಮ ದಿವಸ
Authored by:
Yallamma G
Date:
23 ಜನವರಿ 2026
* ಪ್ರತಿ ವರ್ಷ ಜನವರಿ 23 ರಂದು ಭಾರತದ ಇತಿಹಾಸದಲ್ಲಿ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಗುರುತಿಸಲು ಭಾರತದಲ್ಲಿ ಪರಾಕ್ರಮ್ ದಿವಸ್ (ಶೌರ್ಯ ದಿನ) ಆಚರಿಸಲಾಗುತ್ತದೆ.
* ಪ್ರತಿ ವರ್ಷ ಜನವರಿ 23 ರಂದು "ಪರಾಕ್ರಮ್ ದಿವಸ್" ಎಂದು ಆಚರಿಸಲು ಸರ್ಕಾರ ಘೋಷಿಸುತ್ತದೆ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮ ವಾರ್ಷಿಕೋತ್ಸವವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ, ಇದು ಜನವರಿ 23, 2021 ರಿಂದ ಪ್ರಾರಂಭವಾಗಿದೆ.
* ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಹೆಜ್ಜೆ ಗುರುತನ್ನು ಸ್ಮರಿಸುತ್ತಾ ಪ್ರತಿ ವರ್ಷ ಜನವರಿ 23 ರಂದು ಸುಭಾಷ ಚಂದ್ರ ಬೋಸ್ ಅವರ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಇದು ಅವರ ಜನ್ಮದಿನದ 127 ನೇ ವಾರ್ಷಿಕೋತ್ಸವವಾಗಿದೆ .
* ಸುಭಾಸ್ ಚಂದ್ರ ಬೋಸ್ ಅವರ ಜನ್ಮ ದಿನದಂದು ಪರಾಕ್ರಮ ದಿನವನ್ನಾಗಿ ಆಚರಿಸುವುದರ ಹಿಂದಿನ ಮಹತ್ವ ಸುಭಾಷ್ ಚಂದ್ರ ಬೋಸ್ ಅವರು ಒಡಿಶಾದ ಕಟಕ್ ನಲ್ಲಿ 1897 ರ ಜನವರಿ 23 ರಂದು ಜನಿಸಿದರು.
* ಮೊದಲ ಪರಾಕ್ರಮ್ ದಿವಸ್ ಜನವರಿ 23, 2021 ರಂದು ಕೋಲ್ಕತ್ತಾದ ವಿಕ್ಟೋರಿಯಾ ಸ್ಮಾರಕದಲ್ಲಿತ್ತು. ಮುಂದಿನ ವರ್ಷದಲ್ಲಿ ನೇತಾಜಿಯವರ ಹೊಲೊಗ್ರಾಮ್ ಪ್ರತಿಮೆಯನ್ನು ನವದೆಹಲಿಯ ಇಂಡಿಯಾ ಗೇಟ್ನಲ್ಲಿ ಅನಾವರಣಗೊಳಿಸಲಾಯಿತು.
* 2023 ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದಲ್ಲಿ ಹೆಸರಿಸದ 21 ದ್ವೀಪಗಳಿಗೆ 21 ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಾಯಿತು. 2024 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪು ಕೋಟೆಯಲ್ಲಿ ಪರಾಕ್ರಮ್ ದಿವಸ್ ಅನ್ನು ಉದ್ಘಾಟಿಸಿದರು.
* ಬ್ರಿಟಿಷರನ್ನು ಕುರಿತಂತೆ ಕಾಂಗ್ರೆಸ್ ತಾಳಿದ್ದ ದ್ವಂದ್ವ ನೀತಿಗಳಿಂದ ಸುಭಾಸ್ ಚಂದ್ರ ಬೋಸ್ ಅವರು ಮತ್ತು ಚಿತ್ತರಂಜನ್ ದಾಸ್ ಅವರು ಜೆತೆಗೂಡಿ 'ಸ್ವರಾಜ್ ಪಕ್ಷ' ವನ್ನು ಸ್ಥಾಪಿಸಿದರು.
* ನೇತಾಜಿಯವರಂತೆ ಪ್ರತಿಕೂಲ ಪರಿಸ್ಥಿತಿಯಲ್ಲಿ ಸ್ಥೈರ್ಯದಿಂದ ವರ್ತಿಸಲು ಮತ್ತು ಅವರಲ್ಲಿ ದೇಶಭಕ್ತಿಯ ಉತ್ಸಾಹವನ್ನು ತುಂಬಲು ದೇಶದ ಜನರನ್ನು ವಿಶೇಷವಾಗಿ ಯುವಜನರನ್ನು ಪ್ರೇರೇಪಿಸಲು ಜನವರಿ 23 ಅನ್ನು ಪ್ರತಿ ವರ್ಷ ಪರಾಕ್ರಮ್ ದಿವಸ್ ಎಂದು ಆಚರಿಸಲಾಗುತ್ತದೆ.
* ಭಾರತವು ಸ್ವಾತಂತ್ರ್ಯರಾಗಲು ತನ್ನದೇ ಆದ ರೀತಿಯಲ್ಲಿ ಕೊಡುಗೆ ಹೊತ್ತ ಅಪ್ರತಿಮ ದೇಶ ಭಕ್ತರಾಗಿದ್ದ ಸುಭಾಸ್ ಬೋಸ್ ಅವರ ಜಪಾನಿನ ವಿಮಾನ ಅಪಘಾತಕ್ಕೀಡಾದ ನಂತರದಲ್ಲಿ ಆಗಸ್ಟ್ 18, 1945 ರಂದು ನಿಧನರಾದರು ಎನ್ನಲಾಗಿದೆ.
* ನೇತಾಜಿ ಇನ್ಸ್ಟಿಟ್ಯೂಟ್ ಆಫ್ ಏಷ್ಯನ್ ಸ್ಟಡೀಸ್ನಿಂದ ಹಿಮಾಲಯ ಸಂಸ್ಕೃತಿ, ಭಾಷೆಗಳು ಮತ್ತು ಸಮಾಜದಲ್ಲಿ ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರವಾಗಿ ಇದನ್ನು ಪುನಃ ತೆರೆಯಲಾಯಿತು.
Take Quiz
Loading...