Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಜನವರಿ-15 ಭಾರತೀಯ ಸೇನಾ ದಿನ
15 ಜನವರಿ 2026
➤
ಭಾರತ ಮಾತೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ವೀರ ಯೋಧರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು
ಪ್ರತಿವರ್ಷ ಜನವರಿ 15 ರಂದು 'ಭಾರತೀಯ ಸೇನಾ ದಿನ' (Indian Army Day) ವನ್ನು ಆಚರಿಸಲಾಗುತ್ತದೆ.
ಈ ವರ್ಷ
(2026) ಭಾರತೀಯ ಸೇನೆಯು 78ನೇ ಸೇನಾ ದಿನವನ್ನು ಆಚರಿಸುತ್ತಿದ್ದು,
ಇದು ದೇಶದ ಭದ್ರತೆ ಮತ್ತು ಆತ್ಮನಿರ್ಭರತೆಯ ಸಂಕೇತವಾಗಿದೆ.
➤
2026 ರ ಭಾರತೀಯ ಸೇನಾ ದಿನದ ಥೀಮ್ "ನೆಟ್ವರ್ಕಿಂಗ್ ಮತ್ತು ಡೇಟಾ ಕೇಂದ್ರಿತತೆಯ ವರ್ಷ".
ಈ ಥೀಮ್ ಸಂವಹನ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಯುದ್ಧಭೂಮಿ ದಕ್ಷತೆಯನ್ನು ಬಲಪಡಿಸಲು ಭಾರತೀಯ ಸೇನೆಯು ಡಿಜಿಟಲೀಕರಣ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಯ ಮೇಲೆ ಕೇಂದ್ರೀಕರಿಸುವುದನ್ನು ಎತ್ತಿ ತೋರಿಸುತ್ತದೆ.
➤
ಭಾರತೀಯ ಸೇನೆಯು ಬ್ರಿಟಿಷ್ ಆಳ್ವಿಕೆಯಲ್ಲಿ ಏಪ್ರಿಲ್ 1, 1895 ರಂದು ಸ್ಥಾಪನೆಯಾಯಿತು. ಆದರೆ,
1949 ಜನವರಿ 15
ರಂದು, ಬ್ರಿಟಿಷ್ ಕಮಾಂಡರ್-ಇನ್-ಚೀಫ್ ಜನರಲ್ ಫ್ರಾನ್ಸಿಸ್ ಬುಚರ್ ಅವರಿಂದ ಭಾರತದ
ಫೀಲ್ಡ್ ಮಾರ್ಷಲ್ ಕೆ.ಎಂ.
ಕರಿಯಪ್ಪ
ಅವರು ಅಧಿಕಾರ ವಹಿಸಿಕೊಂಡರು. ಇದರೊಂದಿಗೆ ಕೆ.ಎಂ. ಕರಿಯಪ್ಪ ಅವರು ಸ್ವತಂತ್ರ ಭಾರತದ ಮೊದಲ ಭಾರತೀಯ ಕಮಾಂಡರ್-ಇನ್-ಚೀಫ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಐತಿಹಾಸಿಕ ಘಟನೆಯ ನೆನಪಿಗಾಗಿ ಪ್ರತಿವರ್ಷ ಸೇನಾ ದಿನವನ್ನು ಆಚರಿಸಲಾಗುತ್ತದೆ.
➤
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಮತ್ತು ಶಕ್ತಿ ಪ್ರದರ್ಶನ: ಈ ದಿನದಂದು ದೆಹಲಿ ಮತ್ತು ವಿವಿಧ ಕಮಾಂಡ್ ಕೇಂದ್ರಗಳಲ್ಲಿ ಪೆರೇಡ್, ಸಾಹಸ ಪ್ರದರ್ಶನಗಳ ಮೂಲಕ ಸೇನೆಯ ಶಿಸ್ತು ಮತ್ತು ಬಲವನ್ನು ಪ್ರದರ್ಶಿಸಲಾಗುತ್ತದೆ.
2026ರ ವಿಶೇಷ: ಈ ವರ್ಷದ ಮುಖ್ಯ ಪರೇಡ್ ಮಹಲ್ ರಸ್ತೆಯಲ್ಲಿ ನಡೆಯಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಭಾಗವಹಿಸಲಿದ್ದಾರೆ.
➤ ಭವಿಷ್ಯದ ಯುದ್ಧಭೂಮಿ – ತಂತ್ರಜ್ಞಾನ:-
=>
ಎಕ್ಸೋಸ್ಕೆಲೆಟನ್ಗಳು
: ಸೈನಿಕರ ಶಕ್ತಿ ಮತ್ತು ಸಹನಶೀಲತೆ ಹೆಚ್ಚಳ
=>
ಸ್ವಯಂಚಾಲಿತ ಯುದ್ಧ ವಾಹನಗಳು (ACVs)
: ಮಾನವ ಹಾನಿ ಕಡಿತ
=>
ಕೃತಕ ಬುದ್ಧಿಮತ್ತೆ (AI)
: ವೇಗವಾದ, ನಿಖರ ಯುದ್ಧ ನಿರ್ಧಾರಗಳು
ಇವುಗಳಿಂದ ಯುದ್ಧದಲ್ಲಿ ಮಾನವ ಹಾನಿ ಕಡಿಮೆಯಾಗಲಿದ್ದು, ಸೇನೆಯ ಕಾರ್ಯಕ್ಷಮತೆ ಹೆಚ್ಚಾಗಲಿದೆ.
➤
"ಸೇವಾ ಪರಮೋ ಧರ್ಮಃ" ಎಂಬ ಮಂತ್ರದೊಂದಿಗೆ ಕಾರ್ಯನಿರ್ವಹಿಸುವ ಭಾರತೀಯ ಸೇನೆಯು ಇಂದು ಆಧುನಿಕ ತಂತ್ರಜ್ಞಾನವನ್ನು ಅಪ್ಪಿಕೊಳ್ಳುವ ಮೂಲಕ ಜಗತ್ತಿನ ಬಲಿಷ್ಠ ಸೇನೆಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ.
Take Quiz
Loading...