* ಒಂದು ರಾಷ್ಟ್ರವಾಗಿ ಭಾರತದ ಜನರನ್ನು ಒಟ್ಟುಗೂಡಿಸುವ ಭಾಷೆಯಾಗಿ ಹಿಂದಿ ಮಹತ್ವವನ್ನು ಪಡೆದುಕೊಂಡಿದೆ. ಪ್ರತಿ ವರ್ಷ ಜನವರಿ 10 ರಂದು ವಿಶ್ವ ಹಿಂದಿ ದಿನವನ್ನು ಆಚರಿಸಲಾಗುತ್ತದೆ. * ವರದಿಗಳ ಪ್ರಕಾರ 2025 ವಿಶ್ವ ಹಿಂದಿ ದಿನ ಥೀಮ್ "ಹಿಂದಿ: ಏಕತೆ ಮತ್ತು ಸಾಂಸ್ಕೃತಿಕ ಹೆಮ್ಮೆಯ ಜಾಗತಿಕ ಧ್ವನಿ." ಇದು ಡಿಜಿಟಲ್ ಯುಗದಲ್ಲಿ ಭಾಷೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.* ಸಾಹಿತ್ಯ ಕ್ಷೇತ್ರಕ್ಕೆ ಹಿಂದಿ ಭಾಷೆಯ ಕೊಡುಗೆ ಮತ್ತು ಅದರ ಪರಂಪರೆಯನ್ನು ನೆನಪಿಸುವಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. * ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಭಾಷೆ ಹಿಂದಿ. ಜಗತ್ತಿನಲ್ಲಿ ಜನರು ಹೆಚ್ಚಾಗಿ ಮಾತನಾಡುವ ಭಾಷೆಗಳ ಸಾಲಿನಲ್ಲಿ ಹಿಂದಿಗೆ ಮೂರನೇ ಸ್ಥಾನ ಇದಕ್ಕಿದೆ. * 1949 ರಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯನ್ನು ಮಾತನಾಡಲಾಯಿತು. ನಂತರ 2006 ರಲ್ಲಿ ಮೊದಲ ವಿಶ್ವ ಹಿಂದಿ ದಿವಸ್ ಅನ್ನು ಆಚರಿಸಲಾಯಿತು. ಆಗಿನ ಪ್ರಧಾನ ಮಂತ್ರಿಗಳಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಈ ದಿನವನ್ನು ಆಚರಿಸಿದರು. ಅಂದಿನಿಂದ ಪ್ರತಿವರ್ಷ ಜನವರಿ 10 ಅನ್ನು ವಿಶ್ವ ಹಿಂದಿ ದಿನವನ್ನಾಗಿ ಎಲ್ಲೆಡೆ ಆಚರಿಸಲಾಗುತ್ತದೆ.* ಇಂಗ್ಲಿಷ್ ಜೊತೆಗೆ ಕೇಂದ್ರ ಸರ್ಕಾರದ ಅಧಿಕೃತ ಭಾಷೆಗಳಲ್ಲಿ ಒಂದಾದ ಹಿಂದಿ, ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್ ಪ್ರಕಾರ 22 ಪರಿಶಿಷ್ಟ ಭಾಷೆಗಳಲ್ಲಿ ಒಂದಾಗಿದೆ. ದೇವನಾಗರಿ ಲಿಪಿಯಲ್ಲಿ ಬರೆಯಲ್ಪಟ್ಟ ಹಿಂದಿಯನ್ನು ಪ್ರಪಂಚದಾದ್ಯಂತ ಸುಮಾರು 600 ಮಿಲಿಯನ್ ಜನರು ಮಾತನಾಡುತ್ತಾರೆ.* ಭಾರತ ಸರ್ಕಾರದ ಅಧಿಕೃತ ಭಾಷೆ ಹಿಂದಿಯಾಗಿದೆ. ಇಡೀ ಭಾರತದಲ್ಲಿ ಇಂಗ್ಲೀಷ್ ಜೊತೆಗೆ ಬಳಕೆ ಮಾಡುವ ಅಧಿಕೃತ ಭಾಷೆಗಳಲ್ಲಿ ಹಿಂದಿಯೂ ಒಂದಾಗಿದೆ. ವಿಶ್ವ ಹಿಂದಿ ದಿನವನ್ನು ಆಚರಿಸುವ ಉತ್ತಮ ಮಾರ್ಗವೆಂದರೆ ಹಿಂದಿ ಭಾಷೆಯ ಮಹತ್ವವನ್ನು ಜನರಿಗೆ ತಿಳಿಸುವುದಾಗಿದೆ. ಭಾಷಣ, ನಾಟಕ, ಸಂಗೀತ ಮತ್ತು ಮುಂತಾದ ಕಲೆಗಳ ಮುಖಾಂತರ ಹಿಂದಿ ಭಾಷೆಯ ಬಗ್ಗೆ ಜ್ಞಾನವನ್ನು ಮೂಡಿಸಬಹುದಾಗಿದೆ.