* ಒಂದು ರಾಷ್ಟ್ರವಾಗಿ ಭಾರತದ ಜನರನ್ನು ಒಟ್ಟುಗೂಡಿಸುವ ಭಾಷೆಯಾಗಿ ಹಿಂದಿ ಮಹತ್ವವನ್ನು ಪಡೆದುಕೊಂಡಿದೆ. ಪ್ರತಿ ವರ್ಷ ಜ.10 ರಂದು ವಿಶ್ವ ಹಿಂದಿ ದಿನವನ್ನು ಆಚರಿಸಲಾಗುತ್ತದೆ. * ಸಾಹಿತ್ಯ ಕ್ಷೇತ್ರಕ್ಕೆ ಹಿಂದಿ ಭಾಷೆಯ ಕೊಡುಗೆ ಮತ್ತು ಅದರ ಪರಂಪರೆಯನ್ನು ನೆನಪಿಸುವುಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. * ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಭಾಷೆ ಹಿಂದಿ. ಜಗತ್ತಿನಲ್ಲಿ ಜನರು ಹೆಚ್ಚಾಗಿ ಮಾತನಾಡುವ ಭಾಷೆಗಳ ಸಾಲಿನಲ್ಲಿ ಹಿಂದಿಗೆ ಮೂರನೇ ಸ್ಥಾನ ಇದಕ್ಕಿದೆ. * 1949 ರಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯನ್ನು ಮಾತನಾಡಲಾಯಿತು. ನಂತರ 2006 ರಲ್ಲಿ ಮೊದಲ ವಿಶ್ವ ಹಿಂದಿ ದಿವಸ್‌ ಅನ್ನು ಆಚರಿಸಲಾಯಿತು. ಆಗಿನ ಪ್ರಧಾನ ಮಂತ್ರಿಗಳಾಗಿದ್ದ ಡಾ. ಮನಮೋಹನ್‌ ಸಿಂಗ್‌ ಅವರು ಈ ದಿನವನ್ನು ಆಚರಿಸಿದರು. ಅಂದಿನಿಂದ ಪ್ರತಿವರ್ಷ ಜನವರಿ 10 ಅನ್ನು ವಿಶ್ವ ಹಿಂದಿ ದಿನವನ್ನಾಗಿ ಎಲ್ಲೆಡೆ ಆಚರಿಸಲಾಗುತ್ತದೆ.* ಭಾರತ ಸರ್ಕಾರದ ಅಧಿಕೃತ ಭಾಷೆ ಹಿಂದಿಯಾಗಿದೆ. ಇಡೀ ಭಾರತದಲ್ಲಿ ಇಂಗ್ಲೀಷ್‌ ಜೊತೆಗೆ ಬಳಕೆ ಮಾಡುವ ಅಧಿಕೃತ ಭಾಷೆಗಳಲ್ಲಿ ಹಿಂದಿಯೂ ಒಂದಾಗಿದೆ. ವಿಶ್ವ ಹಿಂದಿ ದಿನವನ್ನು ಆಚರಿಸುವ ಉತ್ತಮ ಮಾರ್ಗವೆಂದರೆ ಹಿಂದಿ ಭಾಷೆಯ ಮಹತ್ವವನ್ನು ಜನರಿಗೆ ತಿಳಿಸುವುದಾಗಿದೆ. ಭಾಷಣ, ನಾಟಕ, ಸಂಗೀತ ಮತ್ತು ಮುಂತಾದ ಕಲೆಗಳ ಮುಖಾಂತರ ಹಿಂದಿ ಭಾಷೆಯ ಬಗ್ಗೆ ಜ್ಞಾನವನ್ನು ಮೂಡಿಸಬಹುದಾಗಿದೆ* 2024 ರ ವಿಶ್ವ ಹಿಂದಿ ದಿನದ ಥೀಮ್- ಹಿಂದಿ-ಸೇತುವೆ ಸಾಂಪ್ರದಾಯಿಕ ಜ್ಞಾನ ಮತ್ತು ಕೃತಕ ಬುದ್ಧಿಮತ್ತೆ.