* ಪ್ರತಿ ವರ್ಷ ಜನವರಿ 01 ರಂದು ಶಾಂತಿ ಮತ್ತು ಹಂಚಿಕೆಯ ದಿನವಾಗಿ ಜಾಗತಿಕ ಕುಟುಂಬ ದಿನವನ್ನು ಆಚರಿಸಲಾಗುತ್ತದೆ. * ಪ್ರತಿಯೊಬ್ಬರ ಜೀವನದ ಏಳು ಬೀಳಿನಲ್ಲಿ ಕುಟುಂಬ ಹಾಗೂ ಕುಟುಂಬದ ಸದಸ್ಯರು ಪ್ರಮುಖ ಪಾತ್ರವಹಿಸುತ್ತಾರೆ. ಕುಟುಂಬ ಎನ್ನುವ ಪರಿಕಲ್ಪನೆಗೆ ಒಂದು ವಿಶೇಷ ದಿನವನ್ನು ಮೀಸಲಿಡಲಾಗಿದ್ದು, ಅದುವೇ ಜನವರಿ 1. ಪ್ರತಿ ವರ್ಷ ಹೊಸ ವರ್ಷದ ಮೊದಲ ದಿನದಂದು ಆಚರಿಸಲಾಗುವ ಜಾಗತಿಕ ಕುಟುಂಬ ದಿನವು ಜಗತ್ತಿಗೆ ಏಕತೆಯ ಸಕಾರಾತ್ಮಕ ಸಂದೇಶವನ್ನು ಸಾರುತ್ತದೆ.* 2026 ಜನವರಿ 1 ರಂದು ಆಚರಿಸಲಾಗುವ ಜಾಗತಿಕ ಕುಟುಂಬ ದಿನದ ಥೀಮ್ "ಭೂಮಿಯೆಲ್ಲಾ ಒಂದು ಕುಟುಂಬ – ನಾವು ಎಲ್ಲರೂ ಒಂದೇ" ಎಂಬುವುದಾಗಿದೆ.* ಜಾಗತಿಕ ಕುಟುಂಬ ದಿನ ಶಾಂತಿ ಮತ್ತು ಹಂಚಿಕೆಯ ಒಂದು ದಿನ, ಯುನೈಟೆಡ್ ಸ್ಟೇಟ್ಸ್ನಲ್ಲಿ ಪ್ರತಿ ಜನವರಿ 1 ರಂದು ಶಾಂತಿ ಮತ್ತು ಹಂಚಿಕೆಯ ಜಾಗತಿಕ ದಿನವಾಗಿ ಆಚರಿಸಲಾಗುತ್ತದೆ. ಜಾಗತಿಕ ಕುಟುಂಬ ದಿನವು ವಿಶ್ವಸಂಸ್ಥೆಯ ಮಿಲೇನಿಯಮ್ ಆಚರಣೆಯಿಂದ "ಒಂದು ದಿನ ಶಾಂತಿಯಲ್ಲಿ" ಬೆಳೆಯಿತು.* ಪ್ರತಿಯೊಬ್ಬರಿಗೂ ಬದುಕಲು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಭೂಮಿಯು ಒಂದು ಜಾಗತಿಕ ಕುಟುಂಬ ಎಂಬ ಕಲ್ಪನೆಯನ್ನು ಪರಿಗಣಿಸಿ ಮತ್ತು ಪ್ರಚಾರ ಮಾಡುವ ಮೂಲಕ ಒಂದುಗೂಡಿಸುವುದು ಮತ್ತು ಶಾಂತಿಯ ಸಂದೇಶವನ್ನು ಹರಡುವುದು ಇದರ ಗುರಿಯಾಗಿದೆ.* 1997 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಪ್ರಪಂಚದ ಮಕ್ಕಳಿಗಾಗಿ ಶಾಂತಿ ಮತ್ತು ಅಹಿಂಸೆಯ ಸಂಸ್ಕೃತಿಗಾಗಿ ಅಂತರರಾಷ್ಟ್ರೀಯ ದಶಕವನ್ನು ಪ್ರಾರಂಭಿಸಿತು. * 1999 ರಲ್ಲಿ ವಿಶ್ವಸಂಸ್ಥೆಯ ಸದಸ್ಯರು ವಿಶ್ವಕ್ಕೆ ಶಾಂತಿಯನ್ನು ತರಲು ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು ವರ್ಷದ ಮೊದಲ ದಿನವನ್ನು ಜಾಗತಿಕ ಕುಟುಂಬ ದಿನವನ್ನು ಆಚರಿಸಲಾಗುತ್ತದೆ.* ಒನ್ ಡೇ ಇನ್ ಪೀಸ್ ಜನವರಿ 1, 2000 ಹೆಸರಿನ ಮೊದಲ ಮಕ್ಕಳ ಪುಸ್ತಕವು 1996ರಲ್ಲಿ ಪ್ರಕಟವಾಗಿತ್ತು. ಈ ಪುಸ್ತಕವನ್ನು ಅಮೆರಿಕದ ಲೇಖಕರಾದ ಸ್ಟೀವ್ ಡೈಮಾಂಡ್ ಮತ್ತು ರಾಬರ್ಟ್ ಅಲನ್ ಸಿಲ್ವರ್ಸ್ಟ್ರೈನ್ ಬರೆದಿದ್ದರು. 1998ರಲ್ಲಿ ಲಿಂಡಾ ಗ್ರೋವರ್ ಬರೆದ ಟ್ರೀ ಇಸ್ಲ್ಯಾಂಡ್: ಏ ನಾವೆಲ್ ಫಾರ್ ದಿ ನ್ಯೂ ಮಿಲೇನಿಯಂ ಹೆಸರಿನ ಪುಸ್ತಕವು ಬಿಡುಗಡೆಯಾಗಿತ್ತು. * ಜಾಗತಿಕ ಕುಟುಂಬ ದಿನದ ಉದ್ದೇಶ:- ಜಗತ್ತನ್ನು ಒಂದೇ ಕುಟುಂಬವಾಗಿ ಕಾಣುವ ಭಾವನೆ ಬೆಳೆಸುವುದು- ಶಾಂತಿ, ಸಹಬಾಳ್ವೆ ಮತ್ತು ಪರಸ್ಪರ ಗೌರವವನ್ನು ಉತ್ತೇಜಿಸುವುದು- ಹಿಂಸೆಯಿಂದ ದೂರವಾಗಿ, ಮಾನವೀಯ ಸಂಬಂಧಗಳನ್ನು ಬಲಪಡಿಸುವುದು.