* 2024ರಲ್ಲಿ ದೆಹಲಿ ವಿಮಾನ ನಿಲ್ದಾಣ 7.7 ಕೋಟಿ ಪ್ರಯಾಣಿಕರನ್ನು ನಿರ್ವಹಿಸಿದ್ದು, ಇದು ವಿಶ್ವದ 9ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ ಎಂಬ ಗೌರವಕ್ಕೆ ಪಾತ್ರವಾಗಿದೆ. ಇದು 2023ರಲ್ಲಿ 10ನೇ ಸ್ಥಾನದಲ್ಲಿತ್ತು.* ಏರ್ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ, ಅಮೆರಿಕದ ಅಟ್ಲಾಂಟಾ ವಿಮಾನ ನಿಲ್ದಾಣ 10.8 ಕೋಟಿ ಪ್ರಯಾಣಿಕರೊಂದಿಗೆ ಮೊದಲ ಸ್ಥಾನದಲ್ಲಿದೆ.* ದುಬೈ (9.23 ಕೋಟಿ) ಎರಡನೇ, ಡಲ್ಲಾಸ್/ಫೋರ್ಟ್ವರ್ಥ್ (8.78 ಕೋಟಿ) ಮೂರನೇ ಸ್ಥಾನದಲ್ಲಿವೆ.* 2024ರಲ್ಲಿ ಜಾಗತಿಕ ವಿಮಾನ ಪ್ರಯಾಣಿಕರ ಸಂಖ್ಯೆ 9.4 ಶತಕೋಟಿಗೆ ತಲುಪಿದ್ದು, ಇದು 2023ಕ್ಕಿಂತ ಶೇ. 8.4 ಹೆಚ್ಚು. 2019ರ ಕೊವಿಡ್ ಪೂರ್ವ ಮಟ್ಟಕ್ಕಿಂತ ಶೇ. 2.7 ಹೆಚ್ಚಳವಾಗಿದೆ. ಟಾಪ್ 20 ಪಟ್ಟಿಯಲ್ಲಿ ಅಮೆರಿಕದ 6 ವಿಮಾನ ನಿಲ್ದಾಣಗಳು ಸೇರಿವೆ.* ವಿಮಾನಗಳ ಸಂಚಾರದ ಆಧಾರದ ಮೇಲೆ ದೆಹಲಿ ವಿಮಾನ ನಿಲ್ದಾಣ 2023ರಲ್ಲಿ 13ನೇ ಸ್ಥಾನದಲ್ಲಿದ್ದು, 2024ರಲ್ಲಿ 15ನೇ ಸ್ಥಾನಕ್ಕೆ ಇಳಿದಿದೆ.