* ಪಾಸ್ಪೋರ್ಟ್ ಪಡೆಯುವ ನೀತಿಯ ಸರಳೀಕರಣಕ್ಕಾಗಿ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತರಲು ನಿರ್ಧರಿಸಿದೆ. ಇನ್ಮುಂದೆ ಪಾಸ್ಪೋರ್ಟ್ಗೆ ಜನನ ಪ್ರಮಾಣಪತ್ರವೇ ಪುರಾವೆಯಾಗಿ ಸಮ್ಮತವಾಗಲಿದೆ. ಆದರೆ ಈ ನಿಯಮ 2023 ಅಕ್ಟೋಬರ್ 1ರ ನಂತರ ಜನಿಸಿದವರಿಗೆ ಮಾತ್ರ ಅನ್ವಯಿಸುತ್ತದೆ.* 1980ರ ಪಾಸ್ಪೋರ್ಟ್ ನಿಯಮಗಳಿಗೆ ತಿದ್ದುಪಡಿ ಜಾರಿಗೊಳಿಸಲು ಟಿಪ್ಪಣಿ ಹೊರಡಿಸಲಾಗಿದೆ. ಅಧಿಕೃತ ಗೆಜೆಟ್ನಲ್ಲಿ ಪ್ರಕಟಿಸಿದ ನಂತರ ಹೊಸ ನಿಯಮಗಳು ಜಾರಿ ಆಗಲಿವೆ.* 2023 ಅಕ್ಟೋಬರ್ 1 ರಿಂದ ಜನಿಸಿದವರಿಗೆ, ಪಾಲಿಕೆ ಅಥವಾ ಅಧಿಕಾರ ಹೊಂದಿರುವ ಪ್ರಾಧಿಕಾರ ನೀಡಿದ ಜನನ ಪ್ರಮಾಣಪತ್ರವೊಂದೇ ಪಾಸ್ಪೋರ್ಟ್ಗೆ ಮಾನ್ಯ ದಾಖಲೆ ಆಗುತ್ತದೆ. ಹೆಚ್ಚುವರಿ ದಾಖಲೆ ಅಗತ್ಯವಿಲ್ಲ.* ಇದಕ್ಕೂ ಮುಂಚೆ ಜನಿಸಿದವರು ಡ್ರೈವಿಂಗ್ ಲೈಸೆನ್ಸ್ ಅಥವಾ ಶಾಲಾ ಟ್ರಾನ್ಸಫರ್ ಪ್ರಮಾಣಪತ್ರವನ್ನು ಜನ್ಮ ದಿನಾಂಕದ ದಾಖಲೆಗಳನ್ನು ಸಲ್ಲಿಸಬೇಕು.