* ಅಮೆರಿಕದ ಸಿಯಾಟಲ್ ಫೆಡರಲ್ ನ್ಯಾಯಾಲಯವು ಅಧ್ಯಕ್ಷ ಟ್ರಂಪ್ ಅವರ ಅಕ್ರಮ ವಲಸಿಗರ ಮಕ್ಕಳ ಜನ್ಮಸಿದ್ಧ ಪೌರತ್ವ ನಿಷೇಧದ ಆದೇಶವನ್ನು ರಾಷ್ಟ್ರದಾದ್ಯಂತ ಅನಿರ್ದಿಷ್ಟಾವಧಿಗೆ ರದ್ದು ಮಾಡಿದೆ.* ದ ನ್ಯಾಯಾಧೀಶ ಜಾನ್ ಕೂನೌರ್ ಅವರು, ಟ್ರಂಪ್ ಅವರು ಈ ಆದೇಶದ ಮೂಲಕ ಸಂವಿಧಾನವನ್ನು ಬದಲಾಯಿಸಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.* ನ್ಯಾಯಾಧೀಶ ಜಾನ್ ಕೂನೌರ್ ಟ್ರಂಪ್ ಅವರ ನಾಲ್ಕು ರಾಜ್ಯಗಳು ಮತ್ತು ವಲಸಿಗರ ಹಕ್ಕುಗಳ ಸಂಘಟನೆಯೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಟ್ರಂಪ್ ಅವರ ಆದೇಶವನ್ನು ಸಂವಿಧಾನ ಪರಿಷ್ಕರಣೆಯ ಯತ್ನವೆಂದು ಟೀಕಿಸಿದರು.* ಮೇರಿಲ್ಯಾಂಡ್ ಮತ್ತು ಬೂಸ್ಟನ್ ಫೆಡರಲ್ ನ್ಯಾಯಾಧೀಶರು ಟ್ರಂಪ್ ಅವರ ಆದೇಶಕ್ಕೆ ತಡೆ ನೀಡುವ ಸಾಧ್ಯತೆ ಇದೆ.* ಅನೇಕ ನಗರಗಳ ಅಟಾರ್ನಿ ಜನರಲ್ಗಳು, ಟ್ರಂಪ್ ಆದೇಶಕ್ಕೆ ತಡೆ ನೀಡಲು ನ್ಯಾಯಾಧೀಶ ಲಿಯೊ ಸೊರೊಕಿನ್ ಅವರಿಗೆ ಮನವಿ ಮಾಡಿದ್ದಾರೆ.* ಅಮೆರಿಕ ಸಂವಿಧಾನವು ಜನ್ಮದತ್ತ ಪೌರತ್ವ ನೀಡುತ್ತದೆ, ಇದನ್ನು ರದ್ದುಪಡಿಸುವ ಅಧಿಕಾರ ಟ್ರಂಪ್ ಅವರಿಗೆ ಇಲ್ಲ. ಪೋಷಕರು ಅಕ್ರಮ ವಲಸಿಗರು ಎಂಬ ಕಾರಣಕ್ಕೆ ಅಮೆರಿಕದಲ್ಲಿ ಹುಟ್ಟಿದ ಮಕ್ಕಳ ಪೌರತ್ವ ಕಸಿದು ಹೊರದಬ್ಬುವುದು ಕಾನೂನುಬಾಹಿರ.