* ಕೇಂದ್ರ ಸರ್ಕಾರ ಈ ಬಾರಿ ದೇಶದ ಮೊದಲ ಡಿಜಿಟಲ್ ಜನಗಣತಿಗೆ ತಯಾರಿ ನಡೆಸುತ್ತಿದೆ. ಇದರ ಭಾಗವಾಗಿ ಜನಗಣತಿಯ ಪ್ರಕ್ರಿಯೆಗೆ ಪೋರ್ಟಲ್ ಹಾಗೂ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.* ಈ ಬಾರಿ ನಾಗರಿಕರು ತಾವೇ ತಮ್ಮ ದತ್ತಾಂಶವನ್ನು ಆ್ಯಪ್ ಅಥವಾ ಪೋರ್ಟಲ್ ಮೂಲಕ ದಾಖಲಿಸಬಹುದಾಗಿದೆ. ಇದು ಮೊಬೈಲ್ ಆ್ಯಪ್ ಮೂಲಕ ನಡೆಯುವ ಮೊದಲ ಜನಗಣತಿ ಆಗಲಿದೆ.* ಜನಗಣತಿಗೆ ಬಳಸುವ ಆ್ಯಪ್ಗಳು ಇಂಗ್ಲಿಷ್, ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಲಿವೆ, ಇದರಿಂದಾಗಿ ಹೆಚ್ಚು ಜನರಿಗೆ ಬಳಸಲು ಸುಲಭವಾಗುತ್ತದೆ.* ದತ್ತಾಂಶ ಸಂಗ್ರಹ, ವರ್ಗಾವಣೆ ಮತ್ತು ಶೇಖರಣೆಯ ಎಲ್ಲ ಹಂತಗಳಲ್ಲಿ ಭದ್ರತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.