* ಸಿಬಿಐ ವಿಶೇಷ ಕೋರ್ಟ್ ಶಿಕ್ಷೆ ವಿಧಿಸಿದ್ದರಿಂದ ಜನಾರ್ದನ ರೆಡ್ಡಿ ಅವರು ಶಾಸಕರ ಸ್ಥಾನದಿಂದ ಅನರ್ಹರಾಗಿದ್ದಾರೆ.* ಈ ಕುರಿತು ವಿಧಾನಸಭಾ ಕಾರ್ಯದರ್ಶಿಯವರು ಅಧಿಕೃತ ಮಾಹಿತಿ ನೀಡಿದ್ದು, ಇದೀಗ ವಿಧಾನಸಭೆಯ ಸದಸ್ಯರ ಸಂಖ್ಯೆ 223ಕ್ಕೆ ಇಳಿದಿದೆ ಎಂದು ತಿಳಿಸಿದ್ದಾರೆ.* ಜನಪ್ರತಿನಿಧಿಗಳ ಕಾಯ್ದೆಯನ್ವಯ, ನ್ಯಾಯಾಲಯದಿಂದ ಶಿಕ್ಷೆಯಾದ ವ್ಯಕ್ತಿಯ ಸದಸ್ಯತ್ವ ರದ್ದಾಗುತ್ತದೆ.* ಜೈಲು ಶಿಕ್ಷೆಯಿಂದ ಮುಕ್ತರಾದ ನಂತರವೂ ಜನಾರ್ದನ ರೆಡ್ಡಿ ಅವರು ಆರು ವರ್ಷಗಳವರೆಗೆ ಚುನಾವಣೆ ಹಕ್ಕಿನಿಂದ ವಂಚಿತರಾಗುತ್ತಾರೆ.* ಓಬಳಾಪುರಂ ಮೈನಿಂಗ್ ಕಂಪೆನಿಯ ಅಕ್ರಮ ಗಣಿಗಾರಿಕೆ ಸಂಬಂಧ ಗಂಗಾವತಿ ಶಾಸಕರಾದ ಗಾಲಿ ಜನಾರ್ದನ ರೆಡ್ಡಿಗೆ ಸಿಬಿಐ ಕೋರ್ಟ್ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.* ಆಂಧ್ರಪ್ರದೇಶದ ಅನಂತಪುರದ ಓಬಳಾಪುರಂನಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ವರ್ಷಗಳ ವಿಚಾರಣೆಯಲ್ಲಿ 3,400ಕ್ಕೂ ಹೆಚ್ಚು ದಾಖಲೆಗಳು ಪರಿಶೀಲಿಸಲ್ಪಟ್ಟಿದ್ದು, 219 ಮಂದಿ ಸಾಕ್ಷಿಗಳನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು.