* ಕೇಂದ್ರ ಸರಕಾರವು ಜನ ವಿಶ್ವಾಸ ವಿಧೇಯಕ 2.0ಯನ್ನು ಜಾರಿಗೊಳಿಸಿದ್ದು, ಭಾರತದ ಸಂಕೀರ್ಣ ಕಾನೂನು ವ್ಯವಸ್ಥೆಯನ್ನು ಸುಧಾರಿಸುವುದನ್ನು ಉದ್ದೇಶಿಸಿದೆ.* ಭಾರತದ ಕಾನೂನು ವ್ಯವಸ್ಥೆಯಲ್ಲಿ ಒಟ್ಟು 882 ಕೇಂದ್ರ ಕಾನೂನುಗಳಿದ್ದು, ಅವುಗಳಲ್ಲಿ 370 ಕ್ರಿಮಿನಲ್ ನಿಬಂಧನೆಗಳಿವೆ.* ಈ ಕಾನೂನುಗಳಲ್ಲಿ 7,305 ಅಪರಾಧಗಳಿದ್ದು, ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆ ಸೇರಿದಂತೆ ಗಂಭೀರ ಶಿಕ್ಷೆಗಳನ್ನು ಒಳಗೊಂಡಿವೆ.* ಅಸ್ತಿತ್ವದಲ್ಲಿರುವ ಕಾನೂನುಗಳು ಸಣ್ಣ ಉಲ್ಲಂಘನೆಗಳಿಗೆ ಕಠಿಣ ಶಿಕ್ಷೆಗಳನ್ನು ವಿಧಿಸುತ್ತವೆ, ಉದಾಹರಣೆಗೆ, ಪ್ರಾಣಿಗಳ ಸಾವುಗಳನ್ನು ವರದಿ ಮಾಡದಿರುವುದು ಅಥವಾ ಇ-ಸಿಗರೇಟ್ಗಳನ್ನು ಸರಿಯಾಗಿ ನಿರ್ವಹಿಸದಿರುವುದು. ಈ ರೀತಿಯ ಕ್ಷುಲ್ಲಕ ತಪ್ಪುಗಳಿಗೆ ನಾಗರಿಕರು ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಈ ಗೊಂದಲವನ್ನು ನಿವಾರಿಸಲು ಜನ - ವಿಶ್ವಾಸ ವಿಧೇಯಕ ಜಾರಿಗೆ ತರಲಾಗಿದೆ.* ಜನ ವಿಶ್ವಾಸ ವಿಧೇಯಕ 2.0 ಶಿಕ್ಷೆಗೆ ಹಿಗ್ಗಿದ ಕಾನೂನು ಕ್ರಮಗಳಿಗಿಂತ ನ್ಯಾಯಕ್ಕೆ ಪ್ರಾಥಮ್ಯ ನೀಡುವ ಪರಿಸರವನ್ನು ರೂಪಿಸಲು ಪ್ರಯತ್ನಿಸುತ್ತದೆ. ಇದು ವಿಚಾರಣಾಧೀನ ಕೈದಿಗಳ ಸಂಖ್ಯೆಯನ್ನು ಇಳಿಸುವುದರ ಜೊತೆಗೆ ಕಾನೂನು ಪ್ರಕ್ರಿಯೆಯನ್ನು ಸುಗಮಗೊಳಿಸಲು ಉದ್ದೇಶಿತವಾಗಿದೆ.